- Advertisement -
![]()
- Advertisement -
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ಮೂರು ಕಾರುಗಳು ಹೊತ್ತಿ ಉರಿದಿವೆ.
ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಿದ್ದ ಕಾರ್ ನಲ್ಲಿ ಮೊದಲಿಗೆ ಸ್ಪೋಟ ಸಂಭವಿಸಿದೆ. ಬಳಿಕ ಉಳಿದ ಮೂರು ಕಾರ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸ್ಪೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಇಬ್ಬರು ಗಾಯಗೊಂಡಿದ್ದಾರೆ.
ಸಂಜೆ 6.45 ರಿಂದ 7 ಗಂಟೆ ಸಮಯದಲ್ಲಿ ಈ ಸ್ಪೋಟ ಸಂಭವಿಸಿದೆ. ತಕ್ಷಣವೇ ಆರೇಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿವೆ.ದೆಹಲಿ ಪೊಲೀಸರು ಈ ಸ್ಪೋಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ.
- Advertisement -


