- Advertisement -
![]()
- Advertisement -
ನವದೆಹಲಿ: ಜಾರಿ ನಿರ್ದೇಶನಾಲಯವು(ಇ.ಡಿ.) ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಈ ಕ್ರಮವನ್ನು ಜಾರಿ ನಿರ್ದೇಶನಾಲಯವು ಕಬ್ಬಿಣದ ಅದಿರಿನ ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೈಗೊಂಡಿದೆ ಎಂದು ವರದಿಯಾಗಿದೆ.
ಪಿಎಂಎಲ್‌ಎ ಕಾಯ್ದೆಯಡಿ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನ.6ರಂದು ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು . ಜಪ್ತಿ ಮಾಡಲಾದ ಆಸ್ತಿಯಲ್ಲಿ, ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಹೆಸರಿನಲ್ಲಿ ಗೋವಾದಲ್ಲಿರುವ ಕೃಷಿ ಭೂಮಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ. ಪ್ರಕರಣದಲ್ಲಿ ಸೈಲ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಶುಕ್ರವಾರವಷ್ಟೇ ಪಿಎಂಎಲ್‌ಎ ನ್ಯಾಯಾಲಯ ರದ್ದುಪಡಿಸಿತ್ತು ಎಂದು ತಿಳಿದುಬಂದಿದೆ.
- Advertisement -


