Thursday, June 4, 2026
Homeಅಪರಾಧಇಬ್ಬರು ಮಕ್ಕಳ ತಾಯಿಯ ಅಕ್ರಮ ಸಂಬಂಧದ ಕಾಟಕ್ಕೆ ನೊಂದ ಯುವಕ; 19 ವರ್ಷದ ಯುವಕ ನೇಣಿಗೆ...

ಇಬ್ಬರು ಮಕ್ಕಳ ತಾಯಿಯ ಅಕ್ರಮ ಸಂಬಂಧದ ಕಾಟಕ್ಕೆ ನೊಂದ ಯುವಕ; 19 ವರ್ಷದ ಯುವಕ ನೇಣಿಗೆ ಶರಣು

- Advertisement -
- Advertisement -

19 ವರ್ಷದ ಯುವಕನೋರ್ವ ಇಬ್ಬರು ಮಕ್ಕಳ ತಾಯಿಯ ಕಾಟಕ್ಕೆ ನೊಂದ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿಖಿಲ್ ಕುಮಾರ್ ಆಂಟಿ ಕಾಟಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ಯುವಕ.

ಗಂಡನಿಂದ ವಿಚ್ಚೇದನ ಪಡೆದುಕೊಂಡಿದ್ದ ಶಾರದಾಗೆ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ಆಕೆ 19 ವರ್ಷದ ನಿಖಿಲ್ ಕುಮಾರ್ ಎಂಬಾತನೊಂದಿಗೆ ಸಂಬಧವನ್ನ ಹೊಂದಿದ್ದು, ಆತನನ್ನು ಆಕೆ ಊರಿನಿಂದ ಹೊರಗಡೆ ಕರೆದುಕೊಂಡು ಹೋಗುತ್ತಿದ್ದಳು ಎಂದು ನಿಖಿಲ್‌ ಮನೆಯವರು ತಿಳಿಸಿದ್ದು, ತಮ್ಮ ಮಗನ ಸಾವಿಗೆ ಶಾರದಾ ಎಂಬ ಮಹಿಳೆಯೇ ಕಾರಣ ಎಂದು ನಿಖಿಲ್ ಕುಮಾರ್ ಪೋಷಕರು ಆರೋಪಿಸಿದ್ದಾರೆ.

ನಿಖಿಲ್ ಕುಮಾರ್ ಮೇಲೆ ಅಕ್ರಮ ಸಂಬಂಧಕ್ಕಾಗಿ ಶಾರದಾ ಒತ್ತಡ ಹಾಕುತ್ತಿದ್ದಳು. ಪೋಷಕ ವಿರೋಧದ ನಡುವೆಯೂ ಇಬ್ಬರ ಸಂಬಂಧ ಮುಂದುವರಿದಿತ್ತು. ಇದೀಗ ನಿಖಿಲ್ ಕುಮಾರ್ ಶವ ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ಪತ್ತೆಯಾಗಿದೆ. ನೇಣು ಬಿಗಿದುಕೊಂಡು ನಿಖಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

Latest News

error: Content is protected !!