Wednesday, June 3, 2026
Homeಕರಾವಳಿಹಲವು ದೇವಸ್ಥಾನಗಳಿಗೆ ರಥಗಳನ್ನು ನಿರ್ಮಿಸಿದ್ದ ಕಾಷ್ಠಶಿಲ್ಪಿ ಅಚ್ಯುತ ಆಚಾರ್ಯ ನಿಧನ

ಹಲವು ದೇವಸ್ಥಾನಗಳಿಗೆ ರಥಗಳನ್ನು ನಿರ್ಮಿಸಿದ್ದ ಕಾಷ್ಠಶಿಲ್ಪಿ ಅಚ್ಯುತ ಆಚಾರ್ಯ ನಿಧನ

- Advertisement -
- Advertisement -

ಮೂಡುಬಿದಿರೆ: ಕೊಡ್ಯಡ್ಕ ಬಂಕಿಮಜಲು ನಿವಾಸಿ, ಕಾಷ್ಠಶಿಲ್ಪಿ ಅಚ್ಯುತ ಆಚಾರ್ಯ (98) ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಮುಂಬಯಿಯ ಖ್ಯಾತ ರಂಗನಟ, ವಿನ್ಯಾಸಕಾರ ಅಶೋಕ ಆಚಾರ್ಯ ಕೊಡ್ಯಡ್ಕ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಖ್ಯಾತ ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯರ ಜೊತೆಗೂಡಿ ಹಲವಾರು ದೇವಾಲಯಗಳ ರಥಗಳನ್ನು ನಿರ್ಮಿಸಿದ್ದರು. ಮರದ ಹೆಬ್ಬಾಗಿಲುಗಳು, ಕರಾವಳಿಯ ಗುತ್ತುಮನೆಗಳಿಗೆ ಸಂಬಂಧಿಸಿದ ದೈವಗಳ ಮಂಚಗಳ ರಚನೆಯಲ್ಲಿ ಅವರು ಸಿದ್ಧಹಸ್ತರಾಗಿದ್ದರು.

ಕೃಷಿ ಉಪಕರಣಗಳಾದ ಮರದ ನೇಗಿಲು, ನೊಗ, ಕಲಸಿಗೆ ಮತ್ತಿತರ ಮರದ ಸಾಧನಗಳನ್ನು ರಚಿಸಿದ್ದರು. ಅವರು ರಚಿಸಿದ ಸಾಂಪ್ರದಾಯಿಕ ಮರದ ಪರಿಕರಗಳು ಮುಂಬೈಯಲ್ಲಿ ಪ್ರದರ್ಶನದಲ್ಲಿದೆ.

- Advertisement -

Latest News

error: Content is protected !!