Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ನಕಲಿ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 32 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

ಮಂಗಳೂರು; ನಕಲಿ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 32 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

- Advertisement -
- Advertisement -

ಮಂಗಳೂರು; ನಕಲಿ ಷೇರು ಮಾರುಕಟ್ಟೆಯಲ್ಲಿ ಮಂಗಳೂರಿನ ಯುವಕನೊಬ್ಬ ಬರೋಬ್ಬರಿ 32 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.


35 ವರ್ಷದ ಯುವಕನೊಬ್ಬ 10-09-2025 ರಂದು ಮೊಬೈಲ್ ನಲ್ಲಿ ಫೇಸ್ ಬುಕ್ ನೋಡುತ್ತಿರುವ ಸಮಯ ಯಾರೋ ಅಪರಿಚಿತ ವ್ಯಕ್ತಿ ಕಾವ್ಯ ಶೆಟ್ಟಿ ಎಂಬವರು ಫೇಸ್ ಬುಕ್ ನಲ್ಲಿ ಫ್ರೆಂ ಡ್ ರಿಕ್ವೇಸ್ಟ್ ನ್ನು ಕಳುಹಿಸಿದ್ದಾರೆ. ಬಳಿಕ ಯುವಕ ಫ್ರೆಂಡ್ ರಿಕ್ವೇಸ್ಟ್ ನ್ನು ಅಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿರುತ್ತಾರೆ. ನಂತರ ಅಪರಿಚಿತ ವ್ಯಕ್ತಿ ಕಾವ್ಯ ಶೆಟ್ಟಿಯು ಮುಂಬೈಯಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿ ಪಿರ್ಯಾದಿದಾರರಿಗೂ ಟ್ರೇಡಿಂಗ್ ನಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿರುತ್ತಾರೆ. ಇದರಿಂದ ಆಸಕ್ತಿಗೊಂಡ ಪಿರ್ಯಾದಿದಾರರು ಟ್ರೇಡಿಂಗ್ ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿರುತ್ತಾರೆ. ನಂತರ ಕಾವ್ಯ ಶೆಟ್ಟಿಯು 8890918064 ಎಂಬ ವಾಟ್ಸಾಪ್ ನಂಬರ್ ನಿಂದ ಪಿರ್ಯಾದಿದಾರರ ವಾಟ್ಸ್ ಆಪ್ ನಂಬರ್ ಗೆ h5.capdynglobal.org ಎಂಬ ಲಿಂಕ್ ನ್ನು ಕಳುಹಿಸಿ ಜಾಯಿನ್ ತಿಳಿಸಿದಂತೆ ನಾನು ಸದ್ರಿ ಲಿಂಕ್ ನ್ನು ಒತ್ತಿದಾಗ capdynglobal ಎಂಬ ಟ್ರೇಡಿಂಗ್ ಆ್ಯಪ್ ಓಪನ್ ಆಗಿರುತ್ತದೆ. ನಂತರ ಪಿರ್ಯಾದಿದಾರರು ತನ್ನ ಹೆಸರು ಈ ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿ ಸದ್ರಿ ಟ್ರೇಡಿಂಗ್ ಆಪ್ ನಲ್ಲಿ ಜಾಯಿನ್ ಆಗಿರುತ್ತಾರೆ. ನಂತರ ಟ್ರೇಡಿಂಗ್ ನಲ್ಲಿ ಶೇರು ಪರ್ಚೇಸ್ ಮಾಡಲು ರೂ 40,000/- ಹಣ ಪಾವತಿ ಮಾಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ 13-09-2025 ರಂದು ಅಕೌಂಟ್ ನಂಬರ್ 32150200001273 ನೇ ದಕ್ಕೆ ಫೋನ್ ಫೇ ಮಾಡಿರುತ್ತಾರೆ. ಇದಕ್ಕೆ ಲಾಭಾಂಶವಾಗಿ ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಗೆ ರೂ 9,504/- ಹಣ ಜಮೆ ಆಗಿರುತ್ತದೆ. ನಂತರ 2,00,000/- ರೂ ಹಣ ಹಾಕಿದಾಗ ಇದಕ್ಕೆ ಲಾಭಾಂಶವಾಗಿ 23,760/- ರೂ ಹಣ ಜಮೆ ಆಗಿರುತ್ತದೆ.

ಇದರಿಂದ ಸದ್ರಿ ಶೇರು ಮಾರ್ಕೆಟ್ ನಲ್ಲಿ ಪಿರ್ಯಾದಿದಾರರಿಗೆ ನಂಬಿಕೆ ಉಂಟಾಗಿ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ UPI, IMPS & RTGS ಮುಖಾಂತರ ಹಂತ ಹಂತವಾಗಿ ಒಟ್ಟು 32,06,880/-ರೂ ಹಣವನ್ನು ದಿನಾಂಕ 13-09-2025 ರಿಂದ 24-10-2025 ರವರೆಗೆ ಅಪರಿಚಿತ ವ್ಯಕ್ತಿ ಕಾವ್ಯ ಶೆಟ್ಟಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ IMPS & RTGS ಹಾಗು UPI ಮೂಲಕ ವರ್ಗಾವಣೆ ಮಾಡಿರುತ್ತಾರೆ. ಬಳಿಕ ಹಣ ವಂಚನೆ ಬಗ್ಗೆ ಯುವಕನಿಗೆ ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಗಳು ನಕಲಿ ಶೇರ್ ಮಾರ್ಕೆಟಿಂಗ್ ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಪಿರ್ಯಾದಿದಾರರಿಂದ ಮೋಸದಿಂದ ಹಣ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಾಗಿದೆ.

- Advertisement -

Latest News

error: Content is protected !!