- Advertisement -
![]()
- Advertisement -
ಸುಳ್ಯ: ಬಸ್ ನಲ್ಲಿ ಕುಸಿದು ಬಿದ್ದು ವೃದ್ಧೆ ಸಾ*ವನ್ನಪ್ಪಿರುವ ಘಟನೆ ಗೂನಡ್ಕದ ದೊಡ್ಡಡ್ಕಎಂಬಲ್ಲಿ ಅ.29 ರಂದು ನಡೆದಿದೆ. ಸಂಪಾಜೆ ಗ್ರಾಮದ ಬೆಳ್ಳಿಪ್ಪಾಡಿ ಹೂವಯ್ಯರವರ ಪತ್ನಿ ಕಮಲ(70) ಮೃತ ಮಹಿಳೆ.
ಕಮಲ ಅವರು ಸಂಪಾಜೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಬಸ್ ನಲ್ಲಿ ಬರುತ್ತಿದ್ದರು. ಈ ವೇಳೆ ದೊಡ್ಡಡ್ಕ ಬಳಿ ಬರುತ್ತಿರುವಾಗ ಕುಸಿದು ಬಿದ್ದಿದ್ದಿದ್ದಾರೆ. ಕೂಡಲೇ ಅವರನ್ನು ತಾಜ್ ಟರ್ಲಿ ಹೋಟೆಲ್ ನವರು ಆಂಬ್ಯುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.ಆಸ್ಪತ್ರೆಯಲ್ಲಿ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರು ಇವರು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.
- Advertisement -


