Monday, June 8, 2026
Homeಚಿಕ್ಕಮಗಳೂರುಚಿಕ್ಕಮಗಳೂರು ನಗರ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರ ಬಂಧನ

ಚಿಕ್ಕಮಗಳೂರು ನಗರ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರ ಬಂಧನ

- Advertisement -
- Advertisement -

ಚಿಕ್ಕಮಗಳೂರು ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಬಂಧಿತರು.

ಆರೋಪಿಗಳು ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧ ಕಡೆ ಆರೋಪಿಗಳು ಕಳ್ಳತನ ಪ್ರಕರಣ‌ದಲ್ಲಿ ಭಾಗಿಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ  ಚಡ್ಡಿ ಗ್ಯಾಂಗ್ ಕಳ್ಳತನ‌ ಮಾಡುತ್ತಿತ್ತು. ಬಂಧಿತರಿಂದ 495 ಗ್ರಾಂ ಚಿನ್ನ, 1010 ಗ್ರಾಂ ಬೆಳ್ಳಿ, 75 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ.

ನಗರದ ಪೊಲೀಸ್ ಕ್ವಾಟ್ರಸ್ಸ್ ಕಳ್ಳತನ ಪ್ರಕರಣದಲ್ಲಿ ಎಸ್ಪಿ ವಿಕ್ರಂ ಅಮಟೆ ವಿಶೇಷ ತಂಡ ರಚಿಸಿದ್ರು. ಎಎಸ್ಪಿ ಜಯಕುಮಾರ್, ಡಿವೈಎಸ್ಪಿ ಶೈಲೇಂದ್ರ, ನಗರ ರಾಣೆ ಪಿಐ ಅಭಯ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಎರಡೂವರೆ ತಿಂಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ ಗಳನ್ನ ಪೊಲೀಸರು ಕಲೆಕ್ಟ್ ಮಾಡಿದ್ರು. ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಬಂಧಿತರು. ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ಗದಗ ಎಲ್ಲಾ ಕಡೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!