ಮಂಗಳೂರು; ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಯಿಂದ ಸೈಬರ್ ಕಳ್ಳರು 42 ಲಕ್ಷ ದೋಚಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಗೆ ಅಕ್ಟೋಬರ್ 7 ರಂದು ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ-8452801697 ರಿಂದ ಕರೆ ಮಾಡಿ, ಮುಂಬೈ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಈ ವೇಳೆ ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಕಾರ್ಡನ್ನು ಖರೀದೀ ಮಾಡಲಾಗಿದ್ದು, ಅಧರಲ್ಲಿ Fraud calls & sending suspisious links to public ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ವಿಚಾರಣೆಗೆ ಮುಂಬೈಗೆ ಬರುವಂತೆ ತಿಳಿಸಿದ್ದಾರೆ. ಆದರೆ ಮಹಿಳೆ ಮುಂಬೈಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಬಳಿಕ ವಂಚಕರು ಮಹಿಳೆಯಿಂದ ಲೆಟರ್ ಬರೆಯಿಸಿಕೊಂಡು ಅದನ್ನು ಅವರ ವಾಟ್ಸ್ ಆಪ್ ನಂಬ್ರ: 8452801697 ಕ್ಕೆ ಕಳುಹಿಸಿರುತ್ತಾರೆ. ನಂತರ 8105239088 ನಂಬರ್ ನಿಂದ ವಾಟ್ಸ್ ಆಪ್ ವಿಡಿಯೋ ಕರೆ ಮಾಡಿ, ಕಾನ್ಫರೆಸ್ ಕಾಲ್ ನಲ್ಲಿ ಸಿ.ಬಿ.ಐ ಐಪಿಎಸ್ ಆಫೀಸರ್, ಆರ್ ಬಿ ಐ ಮತ್ತು ಸುಪ್ರಿಂ ಕೋರ್ಟ್ ಜಡ್ಜ್ ಗೆ ಸಂಪರ್ಕಿಸಿರುತ್ತಾರೆ .ಸದ್ರಿ ನಂಬರ್:9892611673 ಆಗಿರುತ್ತದೆ. ಸದ್ರಿ ಕಾನ್ಫೆರೆನಸ್ಸ್ ವಿಡಿಯೋ ಕಾಲ್ ನಲ್ಲಿ ಪಿರ್ಯಾದಿದಾರರ ವೈಯಕ್ತಿಕ ವಿವರಗಳನ್ನು ಕೇಳಿ ಪಡೆದುಕೊಂಡಿರುತ್ತಾರೆ ತನ್ನ ಬ್ಯಾಂಕ್ ನ ವಿವರಗಳು ಹಾಗೂ ಬಾಕಿ ಮೊತ್ತವನ್ನೆಲ್ಲಾ ವಿಚಾರಿಸಿದ್ದಾರೆ.
ಬಳಿಕ ಮರು ದಿನ ಸಂತ್ರಸ್ತ ಮಹಿಳೆಗೆ ಕರೆ ಮಾಡಿ ವಂಚಕರು ಬ್ಯಾಂಕ್ ಖಾತೆಗಳ ಪರಿಶಿಲನೇ ಮಾಡಬೇಕು ಎಂದು ತಿಳಿಸಿ ಹಣ ಪಾವತಿಸುವಂತೆ ಹಾಗೂ ಪಾವತಿಸಿದ ಎಲ್ಲಾ ಹಣವನ್ನು ವಾಪಾಸು ನೀಡುವಂತೆ ತಿಳಿಸಿರುತ್ತಾರೆ. ಈ ವಿಷಯಯನ್ನು ಯಾರಿಗೂ ತಿಳಿಸಬಾರದೆಂದು ಮಹಿಳೆಗೆ ಭಯ ಹುಟ್ಟಿಸಿರುತ್ತಾರೆ, ಇದರಿಂದ ಪಿರ್ಯಾದಿದಾರರು ಸಂಪೂರ್ಣವಾಗಿ ಭಯ ಭೀತಳಾಗಿ ಈ ವಿಚಾರವನ್ನು ಯಾರಿಗೂ ತಿಳಿಸಿರುವುದಿಲ್ಲ. ಅಂತೆಯೇ ಪಿರ್ಯಾದಿದಾರರು ಅವರು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ:08-10-2025 ರಿಂದ 17-10-2025 ರವರೆಗೆ ತನ್ನ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 42,00,150/- ರೂ ಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾವಣೆ ಮಾಡಿರುತ್ತಾರೆ. ನಂತರದ ದಿನಗಳಲ್ಲಿ ಸದ್ರಿಯವರು ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಪಿರ್ಯಾದಿದಾರರನ್ನು ಒತ್ತಾಯಿಸಿದಾಗ ಭಯಗೊಂಡು ತನ್ನ ಮಕ್ಕಳಿಗೆ ಹಾಗೂ ತಂಗಿಗೆ ವಿಚಾರ ತಿಳಿಸಿದಾಗ ಪಿರ್ಯಾದಿದಾರರು ಮೋಸ ಹೋಗಿರುವ ವಿಚಾರ ಅರಿವಾಗಿರುತ್ತದೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ಹಣ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.


