Friday, June 5, 2026
Homeಕರಾವಳಿಮಂಗಳೂರುಪುತ್ತೂರು : ಅಶೋಕ ಜನಮನ-2025 ಕಾರ್ಯಕ್ರಮದಲ್ಲಿ ನೂಕುನುಗ್ಗಲಾಗಿ 12 ಜನ ಅಸ್ವಸ್ಥ ಪ್ರಕರಣ; 12 ಜನರ...

ಪುತ್ತೂರು : ಅಶೋಕ ಜನಮನ-2025 ಕಾರ್ಯಕ್ರಮದಲ್ಲಿ ನೂಕುನುಗ್ಗಲಾಗಿ 12 ಜನ ಅಸ್ವಸ್ಥ ಪ್ರಕರಣ; 12 ಜನರ ಆರೋಗ್ಯದಲ್ಲಿ ಚೇತರಿಕೆ

- Advertisement -
- Advertisement -

ಪುತ್ತೂರು : ಪುತ್ತೂರು : ಅಶೋಕ ಜನಮನ-2025 ಕಾರ್ಯಕ್ರಮದಲ್ಲಿ ನೂಕುನುಗ್ಗಲಾಗಿ 12 ಜನ ಅಸ್ವಸ್ಥ ಪ್ರಕರಣಣಕ್ಕೆ ಸಂಬಂಧಪಟ್ಟಂತೆ  12 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

12 ಜನರು ಚಿಕಿತ್ಸೆ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ಕಳುಹಿಸಲಾಗಿದೆ. 55 ವರ್ಷದ ಒಬ್ಬ ಮಹಿಳೆಯನ್ನು ಅವರ    ಸಕ್ಕರೆ ಕಾಯಿಲೆ ಮಟ್ಟ ಹೆಚ್ಚಾಗಿರುವ ಕಾರಣ ಆಬ್ಜರ್ವೇಶನ್‌ಗೆ  ಇಟ್ಟು ತದನಂತರ ಅವರನ್ನು ಮನೆಗೆ ಕಳುಹಿಸಲಾಗಿದೆ. ಆಯೋಜಕರು ಆ ಸ್ಥಳದಲ್ಲಿ ಒಂದು ಹೊತ್ತಿಗೆ  ಜನಸಮೂಹದ ಗರಿಷ್ಠ ಸಂಖ್ಯೆ 25,000 ಕ್ಕಿಂತ ಹೆಚ್ಚು ಮೀರುವುದಿಲ್ಲ  ಎಂದು ಬರವಣಿಗೆಯ ಮೂಲಕ ನೀಡಿರುತ್ತಾರೆ.  ಮತ್ತು ಮುಖ್ಯಮಂತ್ರಿ ಅವರ ಭೇಟಿಯ ವೇಳೆಯಲ್ಲಿ ಸುಮಾರು 20,000 ಜನ ಮಾತ್ರ ಇದ್ದರು, ( 12000 ಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು )ಹಾಗೂ ಕೆಲವು ಮಂದಿ ಬಂದು ಹೋಗುವ  ಜನಸಂದಣಿಯೂ ಇತ್ತು. ಆ ಸಮಯದಲ್ಲಿ ಒಟ್ಟು ಜನಸಮೂಹವು ಮೈದಾನದ ಸಾಮರ್ಥ್ಯವಾದ 20,000 ರಿಂದ 25,000 ಜನರ ಮಟ್ಟವನ್ನು ಮೀರಿರಲಿಲ್ಲ.

 ಸರ್ಕಾರದ ಆದೇಶದಲ್ಲಿ ಅನುಮತಿ ಇಲ್ಲ ಎಂದು ಹೇಳಿಲ್ಲ. ಅದರಲ್ಲಿ ಪೂರ್ವಾನುಮತಿ ಅಗತ್ಯ ಎಂದು ಹೇಳಲಾಗಿದೆ ಎಂದು ಆಯೋಜನಕರು ತಿಳಿಸಿದ್ದಾರೆ.

- Advertisement -

Latest News

error: Content is protected !!