Monday, June 15, 2026
Homeಕರಾವಳಿಮಂಗಳೂರುಪುತ್ತೂರು: ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಲ್ಲ ಎಂದು ಆಟೋ ಚಾಲಕ ಮೇಲೆ ಟ್ರಾಫಿಕ್‌ ಪೊಲೀಸರಿಂದ ಹಲ್ಲೆ;...

ಪುತ್ತೂರು: ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಲ್ಲ ಎಂದು ಆಟೋ ಚಾಲಕ ಮೇಲೆ ಟ್ರಾಫಿಕ್‌ ಪೊಲೀಸರಿಂದ ಹಲ್ಲೆ; ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

- Advertisement -
- Advertisement -

ಪುತ್ತೂರು: ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಲ್ಲ ಎಂದು ಆಟೋ ಚಾಲಕ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.

ಪುತ್ತೂರು ಟ್ರಾಫಿಕ್‌ ಪೊಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿ ಆಟೋ ರಿಕ್ಷಾವನ್ನು ಬೆನ್ನಟ್ಟಿ ಬಂದು, ರಿಕ್ಷಾದ ಕೀ ಕಿತ್ತುಕೊಳ್ಳಲು ಪ್ರಯತ್ನ ಮಾಡುವುದು, ಪೊಲೀಸರ ವಿಡಿಯೋ ಮಾಡುತ್ತೀಯಾ ಎಂದು ಪ್ರಶ್ನೆ ಮಾಡುವುದು, ಆತನ ಅಂಗಿಯನ್ನು ಹಿಡಿದೆಳೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದು, ಮೈ ಮೇಲೆ ಕೈ ಮಾಡುವುದು ವೀಡಿಯದಲ್ಲಿ ನೋಡಬಹುದಾಗಿದೆ.

ಈ ಪ್ರಕರಣದ ವೀಡಿಯೋ ವೈರಲ್‌ ಆಗಿದ್ದು, ಇದನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದೆ. ಈ ವಿಡಿಯೋದಲ್ಲಿ ಇಬ್ಬರು ಪೊಲೀಸರ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ತೋರುತ್ತಿದ್ದು, ಇದನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!