Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಅಕ್ಟೋಬರ್ 26 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

ಮಂಗಳೂರು; ಅಕ್ಟೋಬರ್ 26 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

- Advertisement -
- Advertisement -

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲಾಡಳಿತ‌, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,  My Bharath ದಕ್ಷಿಣ ಕನ್ನಡ ಜಿಲ್ಲೆ, ಕೊಣಾಜೆ ಗ್ರಾಮ ಪಂಚಾಯತ್‌, ಸಮರ್ಪಣಾ ಪರಿವಾರ ಟ್ರಸ್ಟ್‌ (ರಿ), ಮಂಗಳೂರು ಹಾಗೂ ದ.ಕ.ಜಿಲ್ಲಾ ಯುವಜನ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವು ದಿನಾಂಕ:26-10-2025ರಂದು ಬಂಟರ ಭವನ, ಅಸೈಗೋಳಿ, ಕೊಣಾಜೆ ಗ್ರಾಮ, ಉಳ್ಳಾಲ ತಾಲೂಕು ಇಲ್ಲಿ ನಡೆಯಲಿದೆ.

ಸದ್ರಿ ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಸ್ಪರ್ಧೆ (ಜನಪದ  ನೃತ್ಯ, ಜನಪದ ಗೀತೆ, ಕಥೆ ಬರೆಯುವುದು, ಚಿತ್ರ ಕಲೆ, ಘೋಷಣೆ, ಕವಿತೆ ಬರೆಯವುದು, ಇತ್ಯಾದಿ)ಗಳು ನಡೆಯಲಿದ್ದು, ಭಾಗವಹಿಸುವವರು ದಿನಾಂಕ:23-10-2025ರಂದು ಸಂಜೆ 5.00ಗಂಟೆಯೊಳಗಾಗಿ ತಮ್ಮ/ತಂಡದ ಹೆಸರು [email protected] ಗೆ ಇಮೇಲ್‌ ಮೂಲಕ ಅಥವಾ ಖುದ್ದಾಗಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು (0824-2451264, 8105100781, 7899266697) ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಪ್ರಕಟಣೆ ತಿಳಿಸಿರುವುದಾಗಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್‌ ಬೆಳ್ತಂಗಡಿ ಇವರು ಮಾಹಿತಿ ನೀಡಿರುತ್ತಾರೆ.

- Advertisement -

Latest News

error: Content is protected !!