- Advertisement -
![]()
- Advertisement -
ಬ್ರಿಡ್ಜ್ ಟೌನ್: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಾರ್ಬಡೋಸ್ ದೇಶದ ಸಂಸತ್ತಿಗೆ ಭೇಟಿ ನೀಡಿದ್ದಾರೆ.
ಬಾರ್ಬಡೋಸ್ ದೇಶದ ರಾಜಧಾನಿ ಬ್ರಿಡ್ಜ್ ಟೌನ್ ನಗರದಲ್ಲಿರುವ ಸಂಸತ್ ಕಟ್ಟಡಕ್ಕೆ ಭೇಟಿ ನೀಡಿದ ಖಾದರ್ ಮತ್ತು ಹೊರಟ್ಟಿ ಸಂಸದೀಯ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಬಾರ್ಬಡೋಸ್ ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿದ್ದು, ಬ್ರಿಟಿಷ್ ಕಾಮನ್‌ವೆಲ್ತ್ ಗಣರಾಜ್ಯವಾಗಿದೆ. ಅಲ್ಲದೇ ಬಾರ್ಬಡೋಸ್ ಸಂಸತ್ತಿನ ಸಭಾಧ್ಯಕ್ಷ ಪೀಠ ಭಾರತದಿಂದ ನೀಡಲ್ಪಟ್ಟಿದಾಗಿದೆ.
ಬ್ರಿಡ್ಜ್ ಟೌನ್ ನಲ್ಲಿ ನಡೆದಿದ್ದ 68ನೇ ಅಂತರರಾಷ್ಟ್ರೀಯ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಹೊರಟ್ಟಿ ಮತ್ತು ಖಾದರ್ ಅಧಿಕೃತ ಭೇಟಿ ನೀಡಿದ್ದರು.
- Advertisement -


