Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ: ಮಲೆಯಾಳಂ ನಟ ಜಯಕೃಷ್ಣನ್ ಸೇರಿ ಇಬ್ಬರ...

ಮಂಗಳೂರು: ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ: ಮಲೆಯಾಳಂ ನಟ ಜಯಕೃಷ್ಣನ್ ಸೇರಿ ಇಬ್ಬರ ಬಂಧನ, ಮತ್ತೋರ್ವ ನಾಪತ್ತೆ

- Advertisement -
- Advertisement -

ಮಂಗಳೂರು: ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದಡಿ ಮಲೆಯಾಳಂ ನಟ ಜಯಕೃಷ್ಣನ್, ಸಂತೋಷ್ ಅಬ್ರಹಾಂ ಎಂಬವರನ್ನು ಬಂಧಿಸಲಾಗಿದ್ದು, ಮತ್ತೋರ್ವ ನಾಪತ್ತೆ ನಾಪತ್ತೆಯಾಗಿದ್ದಾನೆ.

ದಿನಾಂಕ: 09.10.2025 ರಂದು ರಾತ್ರಿ ಕೇರಳ ಮೂಲದ ಸಂತೋಷ್ ಅಬ್ರಾಹಂ, ನಟ ಜಯಕೃಷ್ಣನ್ ಮತ್ತು ವಿಮಲ್ ಎಂಬುವರುಗಳು Uber ಮತ್ತು Rapido Captain ಆಪ್ ಮೂಲಕ ಕ್ಯಾಬ್ ಬುಕ್ ಮಾಡಿ ಬಿಜೈ ನ್ಯೂ ರೊಡ್, ಮಂಗಳೂರು ಪಿಕ್ ಆಪ್ ಆಡ್ರೆಸ್ ನೀಡಿದ್ದು, ಇದನ್ನು ನೋಡಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ವಾಟ್ಸಾಪ್ ಮೂಲಕ ಕಾಲ್ ಮಾಡಿ ಪಿಕ್ ಆಪ್ ಬಗ್ಗೆ ವಿಚಾರಿಸಿದಾಗ ಆಕಡೆಯಿಂದ ಹಿಂದಿ ಭಾಷೆಯಲ್ಲಿ ಮಾತನಾಡಿ ಪಿರ್ಯಾದಿದಾರರಿಗೆ ಮುಸ್ಲಿಂ ತೀವ್ರವಾದಿ, ಟೆರರಿಸ್ಟ್, ಎಂದು ಅಪಹಾಸ್ಯವಾಗಿ ಮಾತನಾಡಿ, ಮುಸ್ಲಿಮ್ ಟೆರರಿಸ್ಟ್ ಎಂದು ಹಿಂದಿ ಭಾಷೆಯಲ್ಲಿ ಬೊಬ್ಬೆ ಹಾಕಿ, ಮಲಯಾಳಂ ಭಾಷೆಯಲ್ಲಿ ತಾಯಿಗೆ ಅವಾಚ್ಯವಾಗಿ ಬೈದಿರುತ್ತಾರೆ. ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ನೀಡಿದ ದೂರಿನಂತೆ ದಿನಾಂಕ: 10.10.2025 ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

- Advertisement -

Latest News

error: Content is protected !!