Saturday, June 6, 2026
Homeತಾಜಾ ಸುದ್ದಿಶಾಸಕರ ಭವನದಲ್ಲಿ ಬಾಂಬ್ ಇರಿಸಿದ್ದ ಪ್ರಕರಣ ಮರು ತನಿಖೆಗೆ ಮನವಿ; ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಂಗಳೂರು...

ಶಾಸಕರ ಭವನದಲ್ಲಿ ಬಾಂಬ್ ಇರಿಸಿದ್ದ ಪ್ರಕರಣ ಮರು ತನಿಖೆಗೆ ಮನವಿ; ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಶಾಂತ್ ಸಂಬರ್ಗಿ ದೂರು

- Advertisement -
- Advertisement -

ಬೆಂಗಳೂರು: 2003ರಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ಬಾಂಬ್ ಇರಿಸಿದ್ದ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಇಂದು ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದು, ಮರು ತನಿಖೆ ಮಾಡುವಂತೆ ಮನವಿ ನೀಡಿದ್ದಾರೆ.

2003 ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಬಾಂಬ್ ಇರಿಸಿದ್ದ ಪ್ರಕರಣ ದಾಖಲಾಗಿತ್ತು. ನಂತರ 2016 ರಲ್ಲಿ ಪ್ರಕರಣದಲ್ಲಿ ಮಟ್ಟಣ್ಣನವರ್ ಖುಲಾಸೆಯಾಗಿದ್ದರು.

ಅನಂತರ ಹಲವು ಬಾರಿ ನಾನೇ ಬಾಂಬ್ ಇರಿಸಿದ್ದು ಎಂದು ಗಿರೀಶ್ ಮಟ್ಟೆಣ್ಣನವರ್ ಬಹಿರಂಗವಾಗಿ ಹೇಳಿರುವ ಕಾರಣ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಪ್ರಶಾಂತ್ ಸಂಬರ್ಗಿ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅಲ್ಲದೇ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೂ ಸಂಬರ್ಗಿ ದೂರಿನ ಪ್ರತಿ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!