- Advertisement -
![]()
- Advertisement -
ಮಂಗಳೂರು : ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮಂಗಳೂರು ಜಿಲ್ಲಾ ಕೋರ್ಟ್ ಗೆ ಇಂದು ಸರೆಂಡ್ ಆಗಿದ್ದಾನೆ.
ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭರತ್ ಕುಮ್ಡೇಲು ಕಳೆದ 3-4 ತಿಂಗಳಿನಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ವಾರೆಂಟ್ ಜಾರಿ ಮಾಡಿದ್ದರು ಇದರಿಂದ ಮಂಗಳೂರು ಜಿಲ್ಲಾ ಕೋರ್ಟ್ ಗೆ ಅ.10 ರಂದು ತಮ್ಮ ವಕೀಲರ ಮೂಲಕ ಬಂದು ಸರೆಂಡರ್ ಅಗಿದ್ದಾನೆ ಎನ್ನಲಾಗಿದೆ.
ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕೂಡ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದು ಬಂಟ್ವಾಳ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ ಒಟ್ಟು 14 ಮಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೋಕಾ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಬಂದು ಸರೆಂಡರ್ ಅಗಿದ್ದಾನೆ.
- Advertisement -


