Friday, June 5, 2026
Homeಕರಾವಳಿಉಡುಪಿಕಾರ್ಕಳ : ಆಟೋ ಡಿಕ್ಕಿಯಾಗಿ ಪಾದಚಾರಿ ಯುವಕ ಸಾವು

ಕಾರ್ಕಳ : ಆಟೋ ಡಿಕ್ಕಿಯಾಗಿ ಪಾದಚಾರಿ ಯುವಕ ಸಾವು

- Advertisement -
- Advertisement -

ಕಾರ್ಕಳ : ಆಟೋ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿರುವ ಘಟನೆ ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರಾಜೇಶ್ ಮೃತ ಯುವಕ.
ಪ್ರೇಮಾನಂದ ಆರೋಪಿ ಆಟೋ ಚಾಲಕ.

ಪ್ರಕರಣದ ವಿವರ : ದಿನಾಂಕ 05/10/2025 ರಾಜೇಶ್ ಅವರು ತನ್ನ ಸ್ನೇಹಿತನೊಂದಿಗೆ ರಾತ್ರಿ 11:00 ಗಂಟೆಗೆ ಬೆಳ್ಮಣ್ ಪೇಟೆ ಕಡೆಯಿಂದ ಗೋಳಿಕಟ್ಟೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಟೋ ಚಾಲಕ ಪ್ರೇಮಾನಂದ ಅಟೋರಿಕ್ಷಾವನ್ನು ಅದೇ ದಿಕ್ಕಿನಲ್ಲಿ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಆತನ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಾದಚಾರಿ ರಾಜೇಶ್ ರವರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ರಾಜೇಶ್ ರವರು ಡಾಮಾರು ರಸ್ತೆಗೆ ಬಿದ್ದು, ಅವರ ತಲೆಗೆ ರಕ್ತ ಗಾಯವಾಗಿದ್ದು, ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 07/10/2025 ರಂದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!