- Advertisement -
![]()
- Advertisement -
ಕಾಸರಗೋಡು: ಮಂಜೇಶ್ವರ ಪೊಲೀಸರು ಕಾಸರಗೋಡು ಮಂಜೇಶ್ವರದ ವರ್ಕಾಡಿ ಸುಳ್ಯಮೆ ಎಂಬಲ್ಲಿನ ಮನೆಯೊಂದರಲ್ಲಿ ಶೆಡ್ ನಲ್ಲಿ ಬಚ್ಚಿಟ್ಟಿದ್ದ 1.16 ಕ್ವಿಂಟಾಲ್ ಗಾಂಜಾವನ್ನು ಅಕ್ಟೋಬರ್ 7ರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಮನೆಯ ಶೆಡ್ ನಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾ ಪತ್ತೆಯಾಗಿದ್ದ, ಪೊಲೀಸರು ತಮಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಯನ್ನ ನಡೆಸಿದ್ದಾರೆ.
ಗಾಂಜಾ ಸಾಗಾಟಕ್ಕೆ ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
- Advertisement -


