Thursday, October 15, 2026
HomeUncategorizedಪುತ್ತೂರು: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕುಂಬ್ರದ ಯುವಕ ಸಾ*ವು

ಪುತ್ತೂರು: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕುಂಬ್ರದ ಯುವಕ ಸಾ*ವು

- Advertisement -
- Advertisement -

ಪುತ್ತೂರು: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ ಸಾ*ವನ್ನಪ್ಪಿರುವ ಘಟನೆ ಕುಂಬ್ರದ ಸಾರೆಪುಣಿಯಲ್ಲಿ ನಡೆದಿದೆ. ಯೋಗೀಶ್ (33) ಮೃತ ಯುವಕ. ಯೋಗೀಶ್ ಸೆಪ್ಟಂಬರ್ 28 ರಂದು ವಿಷ ಸೇವಿಸಿದ್ದರು. ಅಸ್ವಸ್ಥಗೊಂಡಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇದೀಗ ಸಾವನ್ನಪ್ಪಿದ್ದಾರೆ.

ಸಾವಿಗೂ ಮುನ್ನ ಯೋಗೀಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮೃತರು ತಾಯಿ ಶಶಿಕಲಾ,ಪತ್ನಿ ಸುಮಿತ್ರ ಹಾಗೂ ಇಬ್ಬರು ಪುತ್ರಿಯರನ್ನು, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!