ಬೆಂಗಳೂರು; ನಿನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ರೀ ಎಂಟ್ರಿಯಾಗಿದ್ದಾರೆ. ಅತ್ತ ರಕ್ಷಿತಾ ರೀ ಎಂಟ್ರಿಯಾಗುತ್ತಿದ್ದಂತೆ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ನಾಮಿನೇಟ್ ಆಗಿದ್ದರು. ಜಂಟಿ ತಂಡದಿಂದ ಅಮಿತ್, ಕರಿಬಸಪ್ಪ, ಕಾವ್ಯಾ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್, ನಾಮಿನೇಟ್ ಆಗಿದ್ದರು.. ಒಂಟಿಗಳ ತಂಡದಿಂದ ಧನುಶ್ ಮತ್ತು ಕಾಕ್ರೋಚ್ ಸುಧಿ ಅವರು ನಾಮಿನೇಟ್ ಆಗಿದ್ದರು. ನಿನ್ನೆನೇ ಸುದೀಪ್ ಅವರು ಹೇಳಿದ್ದರು ಜಂಟಿ ಗಳ ತಂಡದಿಂದ ಯಾರೇ ಒಬ್ರೂ ಹೋದ್ರೂ ಇಬ್ಬರು ಹೋಗಬೇಕಾಗುತ್ತದೆ. ಒಂಟಿ ತಂಡದಿಂದ ಆದರೆ ಒಬ್ಬರು ಹೋಗ್ತಾರೆ ಅಂತಾ. ಅದರಂತೆ ಈ ವಾರ ಬಿಗ್ ಬಾಸ್ ಸೀಸನ್ 12 ರ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಇಬ್ಬರು ಹೊರಗಡೆ ಹೋಗಿದ್ದಾರೆ. ಅದು ಕೂಡ ಜಂಟಿಗಳ ತಂಡದಿಂದ. ಆರ್ ಜೆ ಅಮಿತ್ ಹಾಗೂ ಕರಿಬಸಪ್ಪ ಅವರು ಮೊದಲ ವಾರವೇ ತಮ್ಮ ಆಟಕ್ಕೆ ವಿದಾಯ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಇಬ್ಬರೂ ಹೊರಗಡೆ ಹೋಗಿದ್ದಾರೆ. ಬಿಗ್ ಬಾಸ್ ಮನೆಗೆ 19 ನೇ ಸ್ಪರ್ಧಿಯಾಗಿ ಆರ್ ಜೆ ಅಮಿತ್ ಎಂಟ್ರಿ ಕೊಟ್ಟಿದ್ದರು. ರೇಡಿಯೋ ಮಿರ್ಚಿಯಲ್ಲಿ ಆರ್‌ಜೆ ಅಮಿತ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಅಮಿತ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ವೀಡಿಯೋಗಳನ್ನು ಮಾಡ್ತಾ ಇರ್ತಾರೆ. ಮಾತಿನ ಮಲ್ಲ ಅಮಿತ್ ಪವಾರ್ ಅವರು ಆರ್ ಜೆ ಆಗಿ ಸಿಕ್ಕಾಪಟ್ಟೆ ಸೌಂಡ್ ಮಾಡಿರೋದರಿಂದ ಅವರು ಬಿಗ್ ಬಾಸ್ ಮನೆಯಲ್ಲೂ ಸೌಂಡ್ ಮಾಡ್ತಾರೆ ಅಂತಾ ಎಲ್ಲರೂ ಅಂದುಕೊಂಡಿದ್ದರು.ಆದರೆ ಹೋದ ಒಂದೇ ವಾರಕ್ಕೆ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.
ಇನ್ನು ಅಮಿತ್ ಗೆ ಜಂಟಿಯಾಗಿ ಸಾಥ್ ಕೊಟ್ಟಿದ್ದ ಕರಿಬಸಪ್ಪ ಕೂಡ ತಮ್ಮ ಬಿಗ್ ಬಾಸ್ ಜರ್ನಿಗೆ ಶುಭಂ ಹಾಡಿದ್ದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಬಾಡಿ ಬಿಲ್ಡರ್. ದಾವಣಗೆರೆಯ ಗಾಂಧಿ ನಗರದ ನಿವಾಸಿ ಆಗಿರುವ ಕರಿಬಸಪ್ಪ ಅವರು ಒಬ್ಬ ಪೌರಕಾರ್ಮಿಕನ ಪುತ್ರ.ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿದ್ದ ಅವರು ಕ್ರೀಡಾ ಕೋಟದಡಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜಿಮ್ ಟ್ರೈನರ್ ಆಗಿ ನೇಮಕ ಗೊಂಡಿದ್ದರು. ಅಂದು ಡಾ. ವಿಷ್ಣುವರ್ಧನ್ ಅವರೊಂದಿಗೆ ಚಲನಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಕರಿಬಸಪ್ಪ ಅವರು ಸೀರಿಯಲ್ಗಳಲ್ಲೂ ನಟನೆ ಮಾಡಿದ್ದಾರೆ. ಹವ್ಯಾಸಿ ಹಾಡುಗಾರನಾಗಿರುವ ಅವರು ಪಾಕಿಸ್ತಾನದಲ್ಲಿ ನಡೆದಂತಹ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧಕ. ಅಲ್ಲದೇ ಏಕಲವ್ಯ ಪ್ರಶಸ್ತಿ ಪುರಸ್ಕೃತರು ದೇಶ ವಿದೇಶ ದಲ್ಲಿಭಾರತದ ಕೀರ್ತಿ ಪತಾಕೆ ಹಾರಿಸಿರುವ ಕರಿಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಮಾತ್ರ ಕೊಂಚ ಡಲ್ ಆಗಿದ್ದರು. ಅಮಿತ್ ಹಾಗೂ ಕರಿಬಸಪ್ಪ ಇಬ್ಬರೂ ಪ್ರತಿಭಾವಂತರು. ಇಬ್ಬರಲ್ಲೂ ಒಳ್ಳೆಯ ಸಾಮರ್ಥ್ಯ ಇದ್ದರೂ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಇಬ್ಬರು ತಮ್ಮ ಪಾಡಿಗೆ ತಾವಿದ್ದು ಡಲ್ ಆದಂತೆ ಕಾಣಿಸಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಇದ್ದರೂ ಅವರಿಬ್ಬರು ಅದನ್ನು ಬಳಸಿಕೊಳ್ಳುವಲ್ಲಿ ಎಡವಿದ್ರು ಅನ್ನೋದಂತೂ ಸತ್ಯ. ಸದ್ಯಕ್ಕೆ ಇಬ್ಬರೂ ಹೊರಗಡೆ ಬಂದಿದ್ದು ಮತ್ತೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ಹಲ್ ಚಲ್ ಎಬ್ಬಿಸಲು ಕರಾವಳಿ ಹುಡುಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ


