Thursday, June 4, 2026
Homeತಾಜಾ ಸುದ್ದಿಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ : ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ : ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

- Advertisement -
- Advertisement -

ಮೈಸೂರು: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ  ಈ ಬಗ್ಗೆ ಮಾತನಾಡಿದ ಅವರು ನಾನು ಯಾರನ್ನು ಗೃಹ ಪ್ರವೇಶಕ್ಕೆ ಆಹ್ವಾನಿಸುವುದಿಲ್ಲ. ಧ್ಯಮದವರನ್ನು ಆಹ್ವಾನಿಸುವುದಿಲ್ಲ. ನೀವು ಮಾಧ್ಯಮವರು ಬಂದರು ಬೇಡ ಎಂದು ಕಳುಹಿಸುತ್ತೇನೆ.ಬರೀ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ನಾನು ಈಗ ಇರುವ ಮನೆ ನನ್ನದಲ್ಲ ಮರಿಸ್ವಾಮಿ ಅವರದ್ದು. ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ನನಗೆ ನನ್ನ ಸ್ನೇಹಿತರಿಗೆ ನನ್ನ ಮಗನಿಗೆ ಊಟ ಹಾಕುವುದು ಮರಿಸ್ವಾಮಿ. ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇನೆ.ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಇಲ್ಲಿ ಜನರನ್ನು ಭೇಟಿ ಮಾಡಲು ಈ ಮನೆಯನ್ನು ಬಳಸಿಕೊಳ್ಳುತ್ತೇವೆ‌ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest News

error: Content is protected !!