ಬೆಳ್ತಂಗಡಿ : ಬುರುಡೆ ಪ್ರಕರಣದ ಬಗ್ಗೆ ಹೋರಾಟಗಾರ ಜಯಂತ್.ಟಿ ಮಾಧ್ಯಮಗಳಿಗೆ ಸೆ.30 ರಂದು ಸಂಜೆ ಮಾಹಿತಿ ನೀಡಿದರು.
ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ನೀಡಿದ 164,161 ಸ್ಟೇಟ್ ಮೆಂಟ್ ಸುಳ್ಳಾ ಎಂಬುದು ತನಿಖೆಯಾಗಬೇಕು. ಪಿತೂರಿ ಮಾಡಿದ ಯಾವುದಾದರು ಅಂಶ ಇದೆಯಾ ಇಲ್ಲ. ಚಿನ್ನಯ್ಯ ತನ್ನ ಅನುಭವ ಹೇಳಿದ್ದಾನೆ.
ಸ್ವಯಂಪ್ರೇರಿತರಾಗಿ ಬಂದು ಮಾಡಿದ್ದು. ದೇವಸ್ಥಾನದ ವಿಚಾರ ಯಾರು ಎತ್ತಿಲ್ಲ, ಅವರಾಗಿಯೇ ಹೇಳುತ್ತಿದ್ದಾರೆ. ದೇವಸ್ಥಾನದಿಂದ ಮೃತದೇಹ ಇರುವ ವಿಚಾರ ಹೇಳುತ್ತಿದ್ದೇವೆ. ಚಿನ್ನಯ್ಯ ಒಂದುವರೆ ತಾಸು ಮಾತಾಡಬೇಕಾದರೆ ಬಾಯಿಹಾಟ್ ಮಾಡಲುಬಸಾಧ್ಯವೇ? ಚಿನ್ನಯ್ಯ ನ ಹೆಸರು ತಮ್ಮಣ್ಣ ಎಂದು. ಅವನನ್ನು ಬೆದರಿಸಿ ಹೇಳಿಕೆ ಪಡೆದಿದ್ದಾರೆ. ಇವತ್ತಲ್ಲ ನಾಳೆ ತನಿಖೆ ಆಗೇ ಆಗುತ್ತದೆ. ಎಸ್ಐಟಿ ಮುಖೇನ ಸತ್ಯ ಹೊರಗೆ ಬಂದೇ ಬರುತ್ತದೆ. ಬಂಗ್ಲೆ ಗುಡ್ಡೆ ಅಕ್ಕಪಕ್ಕ ನಾನು ಕಾಲೇ ಇಟ್ಟಿಲ್ಲ. ಎಸ್ಐಟಿ ತನಿಖೆಯಲ್ಲಿರುವುದರಿಂದ ನಾನು ಹೆಚ್ಚಾಗಿ ಮಾತಾಡುವುದಿಲ್ಲ.
ಧರ್ಮಸ್ಥಳ ಗ್ರಾಮದ ಅಯೋಧ್ಯೆ ಹೋಟೆಲ್ ಪಟ್ಟಾ ಭೂಮಿಯಲ್ಲಿದೆಯಾ ಅಥವಾ ಸರಕಾರಿ ಭೂಮಿಯಲ್ಲಿದೆಯಾ ಎಂದು ಪರಿಶೀಲಿಸಲು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದೆವು. ಈ ವಿಚಾರವಾಗಿ ಬಂದಿದ್ದೆವು. 6 ತಿಂಗಳೊಳಗೆ ಸಂಪೂರ್ಣ ಸತ್ಯ ಎಸ್.ಐ.ಟಿ ಯಿಂದ ಹೊರಬರಲಿದೆ. ನಾವು ತಪ್ಪು ಮಾಡಿದರೆ ಎಸ್ಐಟಿ ಶಿಕ್ಷೆಯಾಗುತ್ತದೆ, ಎಸ್ಐಟಿ ತಪ್ಪು ಮಾಡಿದರೆ ಅದರ ಮೇಲಿನ ವ್ಯವಸ್ಥೆ ತನಿಖೆಗೆ ಬರಲಿದೆ. ನನಗೇನು ಬಂಧನದ ಭೀತಿಯಿಲ್ಲ. ಭಾರತದಲ್ಲಿರುವ ಜೈಲು, ಅಲ್ಲಿ ಊಟ ಎಲ್ಲ ಕೊಡುತ್ತಾರೆ. ಕಾನೂನು ಅರಿವಿಲ್ಲದೆ ತಪ್ಪು ಮಾಡಿದ್ದೇವೊ ನಮಗೆ ತಿಳಿದಿಲ್ಲ. ನ್ಯಾಯಕ್ಕೋಸ್ಕರ ಜೈಲಲ್ಲಿ ಕುಳಿತುಕೊಳ್ಳಲು ನಾವು ಸಿದ್ಧ ಎಂದು ಬೆಳ್ತಂಗಡಿಯಲ್ಲಿ ಹೋರಾಟಗಾರ ಜಯಂತ್.ಟಿ ಮಾಹಿತಿ ನೀಡಿದರು.


