Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ; ಮನೆಯಿಂದ ಅಂಗಡಿಗೆಂದು ಹೋದ ವ್ಯಕ್ತಿ ನಾಪತ್ತೆ

ಬಂಟ್ವಾಳ; ಮನೆಯಿಂದ ಅಂಗಡಿಗೆಂದು ಹೋದ ವ್ಯಕ್ತಿ ನಾಪತ್ತೆ

- Advertisement -
- Advertisement -

ಬಂಟ್ವಾಳ; ಮನೆಯಿಂದ ಅಂಗಡಿಗೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂಡೂರು ಎಂಬಲ್ಲಿ ನಡೆದಿದೆ.ಸಜಿಪಮೂಡ ಗ್ರಾಮದ ಕಂಡೂರು ನಿವಾಸಿ ಸದಾನಂದ (60) ನಾಪತ್ತೆಯಾದವರು. ಈ ಬಗ್ಗೆ ಸದಾನಂದ ಪತ್ನಿ ರೋಹಿಣಿ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.  

ಸದಾನಂದ ಅವರು  ಕಂಡೂರುನಲ್ಲಿ ಎಸ್.ಕೆ ಸುವರ್ಣ ಸೌಂಡ್ಸ್ & ಲೈಟಿಂಗ್ಸ್ ಅಂಗಡಿ ಹೊಂದಿದ್ದು ಸೆ.16 ರಂದು ಸಂಜೆ ತನ್ನ ಮೊಬೈಲ್ ನ್ನು ಮನೆಯ ಬಳಿ ಟೆಂಪೋದಲ್ಲಿ ಬಿಟ್ಟು ಮನೆಯಲ್ಲಿ ಹೇಳದೆ ಹೋಗಿದ್ದು ಈ ತನಕ ಮನೆಗೆ ವಾಪಸು ಬಾರದೆ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

60 ವರ್ಷ ಪ್ರಾಯದ ಸದಾನಂದ ಅವರು 170 ಸೆ ಮೀ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು ಕಾಣೆಯಾದ ದಿವಸ ಬೂದು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟು ಧರಿಸಿರುತ್ತಾರೆ. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

ಮೇಲ್ಕಂಡ ವ್ಯಕ್ತಿಯ ಮಾಹಿತಿ ತಿಳಿದುಬಂದಲ್ಲಿ ಬಂಟ್ವಾಳ ನಗರ ಠಾಣೆಯ ದೂರವಾಣಿ ಸಂಖ್ಯೆ 08255 232111 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಮ್ ಸಂಖ್ಯೆ 9480805300 ಗೆ ತಿಳಿಸುವಂತೆ ಬಂಟ್ವಾಳ ನಗರ ಠಾಣಾ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!