Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬುರುಡೆ ಗ್ಯಾಂಗಿನ ಸಂಪೂರ್ಣ ಷಡ್ಯಂತ್ರ ಇಂದು ಚಿನ್ನಯ್ಯನಿಂದ ಬಯಲು: ಮೊನ್ನೆಯ ಚಿನ್ನಯ್ಯನ ಹೇಳಿಕೆಯ...

ಬೆಳ್ತಂಗಡಿ : ಬುರುಡೆ ಗ್ಯಾಂಗಿನ ಸಂಪೂರ್ಣ ಷಡ್ಯಂತ್ರ ಇಂದು ಚಿನ್ನಯ್ಯನಿಂದ ಬಯಲು: ಮೊನ್ನೆಯ ಚಿನ್ನಯ್ಯನ ಹೇಳಿಕೆಯ ಇನ್ ಸೈಡ್ ಸ್ಟೋರಿ ಇಲ್ಲಿದೆ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಸೆ.23 ರಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಕಣ್ಣೀರಲ್ಲೇ ಸತತ ಮೂರು ಗಂಟೆಗಳ ಕಾಲ ಹೇಳಿಕೆ ನೀಡಿದ್ದು ಈತನ ಹುಟ್ಟು, ಶಿಕ್ಷಣ, ಬಾಲ್ಯ, ಉದ್ಯೋಗ, ಕುಟುಂಬ ಹಾಗೂ ವೈವಾಹಿಕ ಜೀವನ ಸೇರಿದಂತೆ ತಾನು ಬೆಳೆದು ಬಂದ ವಿಚಾರಗಳ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ವೇಳೆ ಬುರುಡೆ ಪ್ರಕರಣದ ವಿಚಾರವಾಗಿ ಮಹತ್ವದ ಹೇಳಿಕೆ ಪಡೆದಿರಲಿಲ್ಲ. ಹಾಗಾಗಿ ಕಲಾಪ ಒಂದರಲ್ಲಿ ಚಿನ್ನಯ್ಯನ ಜೀವನ ಚರಿತ್ರೆ ದಾಖಲಾಗಿದೆ. ಸೆ.25 ರಂದು(ಇಂದು) ಚಿನ್ನಯ್ಯನ ಜೀವನದಲ್ಲಿ ನಡೆದ ‘ಧರ್ಮಸ್ಥಳ ಫೈಲ್ ನ’ ಸುತ್ತ ಹೇಳಿಕೆ ದಾಖಲಾಗಲಿರುವುದರಿಂದ ವಿಶೇಷ ಕಲಾಪವಾಗಿ ಸಮಯ ಮೀಸಲಿರಿಸಲಾಗಿದೆ.

ಬುರುಡೆ ಸೂತ್ರಧಾರಿಗಳ ಹೆಸರು ಬಯಲು:
ಅದೆಲ್ಲೋ ಇದ್ದ ಚಿನ್ನಯ್ಯನನ್ನು ಗ್ಯಾಂಗ್ ಕರೆತಂದು ಬುರುಡೆ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿದ ಸೂತ್ರಧಾರಿಗಳ ಬಗ್ಗೆ ಇಂದು ಹೇಳಿಕೆ ನೀಡಲಿದ್ದಾನೆ.

ಬರುಡೆ ಹೇಗೆ ಬಂತು, ಚಿನ್ನಯ್ಯನ ಕೈಗೆ ಇಟ್ಟವವರಾರು? ಬುರುಡೆ ಇದೆ ಎಂದು ಜಾಗ ಗುರುತಿಸಲು ನಡೆದ ಹುನ್ನಾರಗಳು? ಇದಕ್ಕೆ ಚಿನ್ನಯ್ಯ ಎಷ್ಟು ಬಾರಿ ಭೇಟಿ ನೀಡಿದ್ದ. ಇದರ ಹಿಂದೆ ಯಾರ್ಯಾರು ಇದ್ದಾರೆ? ಇದರ ಮೂಲ ಉದ್ದೇಶ ಏನು? ಷಡ್ಯಂತ್ರಕ್ಕೆ ಚಿನ್ನಯ್ಯನಿಗೆ ಎಷ್ಟು ಮೊತ್ತ ಆಮಿಷ ಒಡ್ಡಲಾಗಿತ್ತು ಎಂಬ ವಿಚಾರದ ಹೇಳಿಕೆ ಇಂದು ನ್ಯಾಯಾಲಯದಲ್ಲಿ ಮುಚ್ಚಿದ ಕಲಾಪದಲ್ಲಿ ಹೇಳಿಕೆ ದಾಖಲಾಗಲಿದೆ.

ಇದು ಮಹತ್ವದ ಸಾಕ್ಷಿಯಾಗಲಿದೆ. ಬುರುಡೆ ಪ್ರಕರಣದ ರೂವಾರಿಗಳ ಬಗ್ಗೆ ಚಿನ್ನಯ್ಯ ಯಾವೆಲ್ಲ ಹೇಳಿಕೆ ನೀಡುತ್ತಾನೆ ಎಂಬ ಮೇಲೆ ತನಿಖೆ ಮುಂದುವರಿಯಲಿದೆ.

- Advertisement -

Latest News

error: Content is protected !!