Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಹೇಳಿಕೆ ಅಂತ್ಯ: ಕೋರ್ಟ್ ನಲ್ಲಿ ಕಣ್ಣೀರು ಹಾಕಿದ ಮಾಸ್ಕ್ ಮ್ಯಾನ್

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಹೇಳಿಕೆ ಅಂತ್ಯ: ಕೋರ್ಟ್ ನಲ್ಲಿ ಕಣ್ಣೀರು ಹಾಕಿದ ಮಾಸ್ಕ್ ಮ್ಯಾನ್

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಹೇಳಿಕೆ ನೀಡಲು ಸೆ.23 ರಂದು ಶಿವಮೊಗ್ಗ ಜೈಲಿನಿಂದ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದಾರೆ. ಕೋರ್ಟ್ ನಲ್ಲಿ ಚಿನ್ನಯ್ಯ ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ ನನಗೆ ಹೇಳಿ ಮಾಡಿಸಿದ್ದಾಗಿ ಕಣ್ಣೀರು ಹಾಕಿದ್ದಾನೆ. ಬಳಿಕ ಪ್ರಕರಣದ ಬಗ್ಗೆ ವಿವರವಾಗಿ ನ್ಯಾಯಾಧೀಶರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಚಿನ್ನಯ್ಯ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಹೆಚ್.ಟಿ ಮುಂದೆ ಹೇಳಿಕೆ ನೀಡಿ ವಾಪಸ್ ಶಿವಮೊಗ್ಗ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

ಇವತ್ತು ಚಿನ್ನಯ್ಯನ ಸಂಪೂರ್ಣ ಹೇಳಿಕೆ ಮುಗಿದಿಲ್ಲ ಮತ್ತೆ ಸೆ.25 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಉಳಿದ ಹೇಳಿಕೆ ದಾಖಲು ಮಾಡಲಿದ್ದಾರೆ ನ್ಯಾಯಾಧೀಶರು.

- Advertisement -

Latest News

error: Content is protected !!