ಬೆಂಗಳೂರು : ಹೈಕೋರ್ಟ್ ಏಕಸದಸ್ಯ ಪೀಠ ಸಿನಿಮಾ ಟಿಕೆಟ್ ದರ 200 ರೂ.ನಿಗಧಿಗೆ ಮಧ್ಯಂತರ ತಡೆ ನೀಡಿದೆ.
ಟಿಕೆಟ್ ದರ 200 ರೂ.ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಮಲ್ಟಿಫ್ಲೆಕ್ಸ್ ಗಳಲ್ಲಿ ದರ ಮಿತಿ ಆದೇಶಕ್ಕೆ ಹೈಕೋ್ರ್ಟ್ ತಡೆಯಾಜ್ಞೆ ನೀಡಿದೆ. ಈ ಆದೇಶವನ್ನು ನ್ಯಾ.ರವಿ ಹೊಸಮನಿ ಅವರಿದ್ದ ಪೀಠ ಹೊರಡಿಸಿದೆ ಎನ್ನಲಾಗಿದೆ.
ಮಲ್ಟಿಫ್ಲೆಕ್ಸ್ ಒಕ್ಕೂಟವು 200 ರೂ. ಸಿನಿಮಾ ಟಿಕೆಟ್ ದರ ನಿಗದಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು.ಮುಂದಿನ ತಿಂಗಳು ( ಅ.2) ರಂದು ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಸಿನಿಮಾ ಟಿಕೆಟ್ ಕಲೆಕ್ಷನ್ ಕಡಿಮೆ ಆಗುವ ಸಾಧ್ಯತೆಯಿದ್ದು, ಇದರಿಂದ ಮಲ್ಟಿಫ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. 200 ರೂ. ಸಿನಿಮಾ ಟಿಕೆಟ್ ದರ ನಿಗದಿ ಪ್ರಶ್ನಿಸಿ ಮಲ್ಟಿಫ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.


