ವಿಟ್ಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ತಾಲೂಕಿನ ಕೂಳೂರು ಗ್ರಾಮದ ನಿವಾಸಿ ” ಅಶ್ರಫ್ @ ಚಿಲ್ಲಿ ಅಶ್ರಫ್ ( 32) ಬಂಧಿತ ಆರೋಪಿ.
ಈತ ಮೇಲೆ 07- 08-2015 ರಂದು ವಿಟ್ಲಪೇಟೆಯಲ್ಲಿ ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿಯ ಎರಚಿ ದರೋಡೆ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ ದಸ್ತಗಿರಿಯಾಗದೇ ಈತ ತಲೆಮರೆಸಿ ಕೊಂಡಿದ್ದ. ಈ ಬಗ್ಗೆ LPC – 03/2025 ರಂತೆ ವಾರೆಂಟ್ ಜಾರಿಯಾಗಿರುತ್ತು.
ಇನ್ನು 23-01-2016 ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್ ನ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದು, ಈ ಪ್ರಕರಣದಲ್ಲೂ ದಸ್ತಗಿರಿಯಾಗದೆ ತಲೆಮರೆಸಿ ಕೊಂಡಿದ್ದ. ಈ ಬಗ್ಗೆ ನ್ಯಾಯಾಲಯದಿಂದ 82 & 83 ವಾರಂಟ್ ಜಾರಿಯಾಗಿತ್ತು. ಅದರಂತೆ ದಿನಾಂಕ 21-09-2025 ಕೂಳೂರು ಮಂಜೇಶ್ವರ ಎಂಬಲ್ಲಿ ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


