Sunday, June 7, 2026
Homeತಾಜಾ ಸುದ್ದಿಚಿತ್ರರಂಗದ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ರುತಿ

ಚಿತ್ರರಂಗದ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ರುತಿ

- Advertisement -
- Advertisement -

ಹಿರಿಯ ನಟಿ ಶ್ರುತಿ ಸೆ. 18 ಗುರುವಾರದಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ತಮ್ಮ ನಿಜಜೀವನದಲ್ಲಿ 50 ವರ್ಷ ಪೂರೈಸಿರುವ ಶ್ರುತಿ, ವೃತ್ತಿ ಬದುಕಿನಲ್ಲಿ 35 ವರ್ಷಗಳನ್ನು ಪೂರೈಸಿದ್ದಾರೆ. ಅವರು ನಟಿಸಿದ ಮೊದಲ ಚಿತ್ರ ‘ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರವು 1990ರಲ್ಲಿ ಬಿಡುಗಡೆಯಾಗಿ 35 ವರ್ಷಗಳನ್ನು ಪೂರೈಸಿದೆ. ಈ ಚಿತ್ರದಲ್ಲಿ ಅವರು ಪ್ರಿಯದರ್ಶಿನಿ ಎಂಬ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಈ ಡಬ್ಬಲ್‍ ಸಂಭ್ರಮವನ್ನು ಶ್ರುತಿ ಚಿತ್ರರಂಗದ ಬಾಂಧವರ ಜೊತೆಗೆ ಹಂಚಿಕೊಂಡಿದ್ದಾರೆ. ಇಸ್ಕಾನ್‍ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್, ರವಿಚಂದ್ರನ್‍, ಮಾಲಾಶ್ರೀ, ಮಾಳವಿಕಾ ಅವಿನಾಶ್‍, ಡಾ. ಜಯಮಾಲಾ, ಅನು ಪ್ರಭಾಕರ್, ರವಿಶಂಕರ್,‍ ಬಿ.ಸಿ. ಪಾಟೀಲ್‍, ಶರಣ್‍, ಆರಾಧನಾ ರಾಮ್‍, ಉಮಾಶ್ರೀ ಸೇರಿದಂತೆ ಹಲವರು ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಶ್ರುತಿ ತಮ್ಮ ಕೇಕ್‍ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಕಾರ್ಯಕ್ರಮವನ್ನು ಶ್ರುತಿ ಅವರ ಮಗಳು ಗೌರಿ ಆಯೋಜಿಸಿದ್ದು ವಿಶೇಷವಾಗಿತ್ತು.

- Advertisement -

Latest News

error: Content is protected !!