Thursday, June 4, 2026
Homeಕರಾವಳಿರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ; ಲಕ್ಷಾಂತರ ರೂ ನಷ್ಟ

ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ; ಲಕ್ಷಾಂತರ ರೂ ನಷ್ಟ

- Advertisement -
- Advertisement -

ಅರಂತೋಡು: ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ರಬ್ಬರ್ ಸುಟ್ಟು ಹೋದ ಘಟನೆ ಸೆ.13ರ ಶನಿವಾರ ತಡರಾತ್ರಿ ನಡೆದಿದೆ.

ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿನ ರಾಧಾಕೃಷ್ಣ ಎಂಬವರಿಗೆ ಸೇರಿದ  ರಬ್ಬರ್ ಸ್ಮೋಕ್ ಹೌಸ್ ಗೆ  ಬೆಂಕಿ ತಗುಲಿ ರಬ್ಬರ್ ಸುಟ್ಟು ಹೋಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸುಮಾರು  1,00,000/- ರೂ. ಮೌಲ್ಯದ ಅಡಿಕೆ ಹಾಗೂ ರಬ್ಬರ್ ಶೀಟುಗಳು ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿಯನ್ನು ಸುಳ್ಯ ಅಗ್ನಿ ಶಾಮಕ ಸಹಾಯಕ ಠಾಣಾಧಿಕಾರಿ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ನಂದಿಸಿದರು.

- Advertisement -

Latest News

error: Content is protected !!