ನೆಲ್ಯಾಡಿ:ತಾಯಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯೊಂದ ಹೋಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ.
ಕಡಬ ತಾಲೂಕಿನ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಕೆ.ಪ್ರಕಾಶ ಎಂಬವರ ಪತ್ನಿ ಓಮನ(53) ಮೃತಪಟ್ಟ ಮಹಿಳೆ. ಓಮನ ತಾಯಿ ಮನೆಗೆ ಹೋಗಿ ಮರುದಿನ ಬರುವುದಾಗಿ ತಿಳಿಸಿ ಸೆ.7ರಂದು ಮನೆಯಿಂದ ಹೋಗಿದ್ದರು. ಸೆ.8ರಂದು ಸಂಜೆಯಾದರೂ ಮನೆಗೆ ವಾಪಾಸು ಬಾರದೇ ಇದ್ದ ಕಾರಣ ಮೃತ ಮಹಿಳೆಯ ತಾಯಿ ಮನೆಗೆ ಫೋನ್ ಮಾಡಿ ವಿಚಾರಿಸಿದಾಗ, ಅಲ್ಲಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮನೆಮಂದಿ ಮತ್ತು ನೆರೆಕರೆಯವರು ಹುಡುಕಾಡಿದಾಗ ಹಳೆ ಮನೆಯಲ್ಲಿ ಬಿದ್ದುಕೊಂಡ ರೀತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ. ಸೆ.7ರ ಬೆಳಿಗ್ಗೆ 10 ಗಂಟೆಯಿಂದ ಸೆ.8ರ ರಾತ್ರಿ 10 ಗಂಟೆಯ ಮಧ್ಯದಲ್ಲಿ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮೃತ ಮಹಿಳೆಯ ಪತಿ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


