- Advertisement -
![]()
- Advertisement -
ಮಂಗಳೂರು; ಸ್ಯಾನ್ ಜೋಸ್ ಕೊಸ್ಟರಿಕ (ಅಮೇರಿಕಾ)ದಲ್ಲಿ ದಿನಾಂಕ: 25-08-2025ರಂದು ನಡೆದ ವರ್ಲ್ಡ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಜ್ಯೂನಿಯರ್ (53 ಕೆ.ಜಿ) ವಿಭಾಗದಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್ ಆಗಿ ಒಟ್ಟು 5 ಚಿನ್ನದ ಪದಕ ಪಡೆದ ಕೀರ್ತನ್ ಕಟೀಲ್ ಅವರು 06/09/2025 ಶನಿವಾರ ಸಂಜೆ 05:30 ಕ್ಕೆ ತವರು ಊರಿಗೆ ಬರಲಿದ್ದಾರೆ.

ಈ ಪ್ರಯುಕ್ತ ಕಟೀಲು ಸೇತುವೆ ಬಳಿಯಿಂದ ಸಾರ್ವಜನಿಕ ಸ್ವಾಗತ ಮೆರವಣಿಗೆಯೊಂದಿಗೆ ಶ್ರೀ ಕಟೀಲು ಅಮ್ಮನ ದರ್ಶನ ಪಡೆದು. ಕಿನ್ನಿಗೋಳಿ ಪೇಟೆಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ತಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶ್ವಮಟ್ಟದಲ್ಲಿ ಸಾಧನೆ ಗಳಿಸಿದ ಸಾಧಕನಿಗೆ ಅಭಿನಂದನೆ ಸಲ್ಲಿಸಬೇಕಾಗಿ ಕಾರ್ಯಕ್ರಮದ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -


