ಮುಲ್ಕಿ: ಮುಂಬೈ ಸೆ 2 ವರ್ಲಿ ಸೆಂಚುರಿ ಬಜಾರ್ ಎದುರಿನ ವೀರ್ ಹರಿಮಾನ್ ರೋಡ್ ಆದರ್ಶ ನಗರ ಹೌಸಿಂಗ್ ಕಾಂಪ್ಲೆಕ್ಸ್ 13 /203 -3 ರ ನಿವಾಸಿ ರಾಘು ಪಿ ಶೆಟ್ಟಿ (90)ಅವರು ವೃದ್ಯಾಪ್ಯದ ಅಸೌಖ್ಯದಿಂದ ಸೆ 2 ರಂದು ನಿಧನರಾಗಿದ್ದಾರೆ.
ಮೂಲತಃ ಮುಲ್ಕಿ ಸಮೀಪದ ಕೊಲ್ನಾಡು ಗುಂಡಾಲ ಗುತ್ತಿನವರಾದ ಅವರು ಹೋಟೆಲ್ ಉದ್ಯಮಿ ಹಾಗೂ ಸಂತೋಷ್ ಕ್ಯಾಟ್ರಸ್ ನ ಮಾಲಕರಾಗಿದ್ದರು. ತುಳುನಾಡಿನ ಆಚಾರ ವಿಚಾರಗಳ ವಿಚಾರಧಾರೆಯೊಂದಿಗೆ ತುಳುನಾಡಿನ ಕಟ್ಟುಕಟ್ಟಳೆಗಳನ್ನು ತಮ್ಮ ಅನುಭವಿ ಅನುಭವದಿಂದ ಜನರಿಗೆ ತಿಳಿಸುತ್ತಿದ್ದರು. ಸಮಾಜ ಸೇವಕರಾಗಿದ್ದ ಅವರು ಮದುವೆ,ನಿಶ್ಚಿತಾರ್ಥ, ಉತ್ತರಕ್ರಿಯೆ, ಮೃತರಾದವರ ಅಪರಕ್ರಿಯೆಗಳನ್ನು ತಮ್ಮ ಅನುಭವಿ ನುಡಿಗಟ್ಟುಗಳ ಮಾತಿನೊಂದಿಗೆ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು.
ಕೇಟರಿಂಗ್ ಉದ್ಯಮದಲ್ಲಿ ವಿಶೇಷವಾಗಿ ಮುಂಬೈ ಉಪನಗರ ಸೇರಿದಂತೆ ಹೊಸ ಹೊಸ ತುಳುನಾಡಿನ ಖಾದ್ಯ ಪದಾರ್ಥಗಳನ್ನು ಮಾಡಿ ಬಡಿಸುವುದರೊಂದಿಗೆ ಅವರು ನಿಸ್ಸೀಮರಾಗಿದ್ದು ಪ್ರಸಿದ್ಧರಾಗಿದ್ದರು.
ಮೃತರು ಪತ್ನಿ ವಾರಿಜಾ ರಾಘು ಶೆಟ್ಟಿ, ಓರ್ವ ಪುತ್ರ ಸಂತೋಷ್ ಆರ್ ಶೆಟ್ಟಿ, ( ಸಂತೋಷ್ ಕ್ಯಾಟರ್ಸ್), ಇಬ್ಬರು ಪುತ್ರಿಯರಾದ ರೇಖಾ ಮತ್ತು ಮಲ್ಲಿಕಾ, ಅಳಿಯ ಸದಾನಂದ ರೈ, ಮೊಮ್ಮಕ್ಕಳು, ಕುಟುಂಬಕರು, ಬಂದು ಮಿತ್ರರು,ಹಿತೈಷಿಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ಮೃತರ ನಿಧನಕ್ಕೆ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ, ಸದಸ್ಯರು, ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು ಬಾಂಬೆ ಬಂಟ್ ಅಸೋಸಿಯನ್ ಅಧ್ಯಕ್ಷ ಅಡ್ವಕೇಟ್ ಡಿ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು ಮತ್ತು ಅವರ ಬಂಧು ಮಿತ್ರರು, ಹಿತೈಷಿಗಳು,ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತಿಮ ಯಾತ್ರೆಯು ಸೆಪ್ಟೆಂಬರ್ 3 ಬುಧವಾರ 9:30 ಕ್ಕೆ ಆದರ್ಶ ನಗರದಿಂದ ಹೊರಡುವುದು ಎಂದು ಅವರು ಕುಟುಂಬ ಮೂಲಗಳು ತಿಳಿಸಿದೆ


