Thursday, June 4, 2026
Homeತಾಜಾ ಸುದ್ದಿಗ್ರಾ. ಪಂ. ಸಾರ್ವತ್ರಿಕ ಚುನಾವಣೆ ಬಗ್ಗೆ ಯಾವುದೇ ವೇಳಾ ಪಟ್ಟಿ ಪ್ರಕಟಿಸಿಲ್ಲ; ರಾಜ್ಯ ಚುನಾವಣಾ ಆಯೋಗದಿಂದ...

ಗ್ರಾ. ಪಂ. ಸಾರ್ವತ್ರಿಕ ಚುನಾವಣೆ ಬಗ್ಗೆ ಯಾವುದೇ ವೇಳಾ ಪಟ್ಟಿ ಪ್ರಕಟಿಸಿಲ್ಲ; ರಾಜ್ಯ ಚುನಾವಣಾ ಆಯೋಗದಿಂದ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿಲ್ಲ ಎಂದು ರಾಜ್ಯ ಚುನಾವಣಾ ‌ಆಯೋಗ ಸ್ಪಷ್ಟನೆ ನೀಡಿದೆ.

ವೇಳಾಪಟ್ಟಿ ಪ್ರಕಟಗೊಂಡಿರುವ ಬಗ್ಗೆ ಸುಳ್ಳು ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ಬಂದಿರುತ್ತದೆ. ಆದರೆ ರಾಜ್ಯ ಚುನಾವಣಾ ಆಯೋಗದಿಂದ ಈ ವರೆಗೂ ಯಾವುದೇ ವೇಳಾಪಟ್ಟಿಯನ್ನು ಪ್ರಕಟಿಸಿರುವುದಿಲ್ಲ‌ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ.

ರಾಜ್ಯ ಚುನಾವಣಾ ಆಯೋಗವು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಮೂಲಕ ಪತ್ರಿಕಾ ಗೋಷ್ಠಿಯನ್ನು ಕರೆದು ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುತ್ತದೆ ಎಂದು ಆಯೋಗ ಹೇಳಿದೆ.

ಪ್ರಸ್ತುತ ಹರಿದಾಡುತ್ತಿರುವ ಚುನಾವಣಾ ವೇಳಾಪಟ್ಟಿಯು ಸುಳ್ಳು ಮಾಹಿತಿಯಾಗಿರುವುದಾಗಿ ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ‌.

- Advertisement -

Latest News

error: Content is protected !!