Thursday, July 16, 2026
Homeತಾಜಾ ಸುದ್ದಿಸರ್ಕಾರಿ ಕೆಲಸಗಳಿಗೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಫ್ಟರ್ ಮತ್ತು ವಿಮಾನ ಸೇವೆ ಪಡೆಯುಲು ರಾಜ್ಯ ಸರ್ಕಾರ...

ಸರ್ಕಾರಿ ಕೆಲಸಗಳಿಗೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಫ್ಟರ್ ಮತ್ತು ವಿಮಾನ ಸೇವೆ ಪಡೆಯುಲು ರಾಜ್ಯ ಸರ್ಕಾರ ‌ನಿರ್ಧಾರ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರಿ ಕೆಲಸಗಳಿಗೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಫ್ಟರ್ ಮತ್ತು ವಿಮಾನ ಸೇವೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ಸಚಿವರು ಮತ್ತು‌ ಅಧಿಕಾರಿಗಳ ಸಭೆ ನಡೆದಿದೆ.

ಇದುವರೆಗೂ ರಾಜ್ಯ ಸರ್ಕಾರದಿಂದ ಗಂಟೆಗಳ ಅವಧಿಗೆ ಹೆಲಿಕಾಪ್ಟರ್ ಸೇವೆ ಗುತ್ತಿಗೆ ಪಡೆಯಲಾಗುತ್ತಿತ್ತು. ಆದರೆ ಇನ್ನು ಮುಂದೆ ಗಂಟೆಗಳ ಆಧಾರದಲ್ಲಿ ಬಾಡಿಗೆಗೆ ಪಡೆಯುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.

ವಾರ್ಷಿಕವಾಗಿ ಗುತ್ತಿಗೆ ಆಧಾರಿತ ಹೆಲಿಕಾಫ್ಟರ್ ಮತ್ತು ವಿಮಾನ ಸೇವೆ ಪಡೆಯಲು ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದ್ದು‌, ಆಸಕ್ತಿಯುಳ್ಳ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗಿಯಾಗಿಯಾಗಲು ಅವಕಾಶ ನೀಡಲಾಗುತ್ತಿದೆ.

ಈ ವರೆಗೆ ಗಂಟೆಗಳ ಆಧಾರದಲ್ಲಿ ಸೇವೆ ಪಡೆಯುತ್ತಿದ್ದ ಕಾರಣ ವಾರ್ಷಿಕವಾಗಿ 28 ಕೋಟಿ ರೂಪಾಯಿ ಸರ್ಕಾರಕ್ಕೆ ವೆಚ್ಚವಾಗುತ್ತಿತ್ತು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!