Saturday, June 13, 2026
Homeಕರಾವಳಿಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತ ಭಟ್ ಗೆ ಬಿಗ್ ರಿಲೀಫ್

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತ ಭಟ್ ಗೆ ಬಿಗ್ ರಿಲೀಫ್

- Advertisement -
- Advertisement -

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಕಳೆದ ನಾಲ್ಕು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದ ಸುಜಾತ ಭಟ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

ವಿಚಾರಣೆ ವೇಳೆ ತಾನು ಮಾಡಿದ ಆರೋಪ ಎಲ್ಲವನ್ನೂ ಸುಳ್ಳು ಸುಜಾತ ಭಟ್  ಒಪ್ಪಿಕೊಂಡಿದ್ದು ಇದಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳಿಗೆ ವಿಡಿಯೋ ಮೂಲಕ ಸುಜಾತ ಭಟ್ ನೀಡಿದ್ದಾರೆ.

ಸುಜಾತ ಭಟ್ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಟಿಷನ್ ಆಗಿ ಬಳಿಕ ಎಸ್.ಐ.ಟಿಗೆ ದೂರು ವರ್ಗಾವಣೆಯಾಗಿದೆ.  ಇನ್ನು ಸುಜಾತ ಭಟ್ ವೃದ್ಧೆಯಾಗಿರುವ ಕಾರಣ ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣವನ್ನು ಎಸ್.ಐ.ಟಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ. ಎಸ್‌.ಐ.ಟಿ ಅಧಿಕಾರಿಗಳು ಕರೆದಾಗ ಬರುವಂತೆ ಸೂಚನೆ ನೀಡಿ ಸುಜಾತ ಭಟ್ ರನ್ನು ವಾಪಸ್ ಬೆಂಗಳೂರಿನ ಅವರ ಮನೆಗೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!