Monday, June 8, 2026
HomeUncategorizedಬಂಟ್ವಾಳ; ಪುಂಜಾಲಕಟ್ಟೆಯಲ್ಲಿ ಗಣೇಶೋತ್ಸವದ ವೇಳೆ ಸಮಯ ಮೀರಿದರೂ ಧ್ವನಿವರ್ಧಕ ಬಳಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ; ಪ್ರಕರಣ...

ಬಂಟ್ವಾಳ; ಪುಂಜಾಲಕಟ್ಟೆಯಲ್ಲಿ ಗಣೇಶೋತ್ಸವದ ವೇಳೆ ಸಮಯ ಮೀರಿದರೂ ಧ್ವನಿವರ್ಧಕ ಬಳಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ; ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ರವರು  ದಿನಾಂಕ: 27-08-2025 ರಂದು ರಾತ್ರಿ ಸುಮಾರು 22.45 ಗಂಟೆಯ ವೇಳೆಗೆ ಧ್ವನಿವರ್ಧಕವನ್ನು ಅಳವಡಿಸಿ ಕಾರ್ಯಕ್ರಮವನ್ನು ನಡೆಯುತ್ತಿರುವುದು ಕಂಡು ಬಂದ ಮೇರೆಗೆ,  ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಕಾರ್ಯಕ್ರಮದ ಅಯೋಜಕರಲ್ಲಿ ಧ್ವನಿ ವರ್ಧಕಗಳ ಬಳಕೆಯ ಬಗ್ಗೆ ಜಾರಿಯಲ್ಲಿರುವ ಕಾನೂನಿನ ಬಗ್ಗೆ ಹಾಗೂ ಸದ್ರಿ ಕಾನೂನುಗಳನ್ನು ಪಾಲಿಸುವಂತೆ ಹಾಗೂ ಈಗಾಗಲೇ ಠಾಣಾ ವತಿಯಿಂದ ನೀಡಲಾಗಿರುವ ನೋಟೀಸ್ ನ ಬಗ್ಗೆ ತಿಳುವಳಿಕೆ ನೀಡಿ, ಧ್ವನಿವರ್ಧಕವನ್ನು ಸ್ಥಗಿತಗೊಳಿಸುವಂತೆ ವಿನಂತಿಸಿಕೊಂಡ ಮೇರೆಗೆ, ಸಂಯೋಜಕರು ಧ್ವನಿವರ್ಧಕವನ್ನು ನಿಲ್ಲಿಸಿರುತ್ತಾರೆ. ಆದರೆ ರಾತ್ರಿ ಸುಮಾರು 23.50 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಪುನಃ ಬಂದಾಗ ಪಿ.ಎಸ್.ಐ ರವರ ನಿರ್ದೇಶನವನ್ನು ಉಲ್ಲಂಘಿಸಿ ಧ್ವನಿವರ್ಧಕವನ್ನು ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳೊಂದಿಗೆ ಕಾನೂನು ಉಲ್ಲಂಘಿನೆಯ ಬಗ್ಗೆ ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ಇದರ ಅಧ್ಯಕ್ಷ ಕೌಶಿಕ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಪುನೀತ್ ಮಡಂತ್ಯಾರು, ತಾರನಾಥ ಕಜೆಕ್ಕಾರು, ಗುರು ಮಡಂತ್ಯಾರು, ನಾಟಕ ಅಯೋಜಕರು,ಮತ್ತು ಸುಮಾರು 10-15 ಇತರ ಜನರ ಗುಂಪು ಸೇರಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಪೊಲೀಸ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಸದ್ರಿ ಆರೋಪಿಗಳು ಕಾರ್ಯಕ್ರಮದ ಅಯೋಜಕರಿಗೆ ನೀಡಲಾಗಿದ್ದ ತಿಳುವಳಿಕೆ ಪತ್ರದ ಷರತ್ತನ್ನು ಉಲ್ಲಂಘಿಸಿ ಧ್ವನಿವರ್ದಕವನ್ನು ಬಳಸಿ,  ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 52/2025, ಕಲಂ: 189(2), 191(2),191(3), 132, 190 BNS-2023, ಮತ್ತು ಕಲಂ: 31,37,92(i) KP Act, ಮತ್ತು ಕಲಂ: 5,6 ಧ್ವನಿ ಮಾಲಿನ್ಯ ನಿಯಂತ್ರಣ ನಿಯಮಗಳು-2000 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!