Thursday, June 25, 2026
Homeಕರಾವಳಿಉಡುಪಿಕಾರ್ಕಳ:  ಅಡಿಕೆ ಜೊತೆ ಸಿಸಿ ಕ್ಯಾಮೆರಾವನ್ನು ಹೊತ್ತೊಯ್ದ ಖತರ್ನಾಕ್ ಕಳ್ಳರು

ಕಾರ್ಕಳ:  ಅಡಿಕೆ ಜೊತೆ ಸಿಸಿ ಕ್ಯಾಮೆರಾವನ್ನು ಹೊತ್ತೊಯ್ದ ಖತರ್ನಾಕ್ ಕಳ್ಳರು

- Advertisement -
- Advertisement -

ಕಾರ್ಕಳ: ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಜೊತೆಗೆ ಸಿಸಿ ಕ್ಯಾಮೆರಾವನ್ನು ಕೂಡ ಖತರ್ನಾಕ್ ಕಳ್ಳರು ಹೊತ್ತೊಯ್ದ ಘಟನೆ ಮುಲ್ಲಡ್ಕ ಗ್ರಾಮದಲ್ಲಿ ನಡೆದಿದೆ.

ಮುಲ್ಲಡ್ಕ ಗ್ರಾಮದ ನಿವಾಸಿ ರವೀಂದ್ರ ಅವರು ತನ್ನ ಅಡಿಕೆ ತೋಟದಲ್ಲಿ ನಿರ್ಮಿಸಿದ್ದ ಶೆಡ್‌ನಲ್ಲಿ ಒಣಗಿದ ಅಡಿಕೆಯನ್ನು ಸಂಗ್ರಹಿಸಿ ಇರಿಸಿದ್ದರು. ಆ. 23ರಂದು ಅಪರಿಚಿತ ಕಳ್ಳರು ಶೆಡ್‌ನ ಬಾಗಿಲ ಬೀಗವನ್ನು ಮುರಿದು ಒಳನುಗ್ಗಿದ್ದಾರೆ. ಅಲ್ಲಿ ದಾಸ್ತಾನು ಇಟ್ಟಿದ್ದ 34 ಗೋಣಿ ಚೀಲ ಅಡಿಕೆ ಕಳವು ಮಾಡಿದ್ದಾರೆ. ಇದರ ಮೌಲ್ಯ ಅಂದಾಜು 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಳ್ಳರು ಅಡಿಕೆ ಕಳವು ಮಾಡಿದ್ದಲ್ಲದೆ, ಶೆಡ್‌ನಲ್ಲಿದ್ದ 6 ಸಾವಿರ ರೂ. ಮೌಲ್ಯದ ಸಿಸಿ ಕೆಮರಾವನ್ನು ಕೂಡ ಕೊಂಡೊಯ್ದಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!