- Advertisement -
![]()
- Advertisement -
ಕಡಬ: ರಾಜಾದ್ಯಂತ ಮಳೆ ಜೋರಾಗಿದ್ದು, ಕಡಬ ತಾಲೂಕಿನ ಸವಣೂರು ಪರಿಸರದಲ್ಲಿಯೂ ಆ.19ರಂದು ಮುಂಜಾನೆ 5 ಗಂಟೆಗೆ ಬೀಸಿದ ಭೀಕರ ಗಾಳಿ ಮಳೆಯಾಗಿದೆ. ಇದರಿಂದಾಗಿ ಸಾರ್ವಜನಿಕ ವಲಯಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಸವಣೂರು ಮೆಸ್ಕಾಂ ಉಪವಿಭಾಗದ ಸವಣೂರು ಗ್ರಾಮದ ಕೆಡೆಂಜಿ, ಆರೇಲ್ತಡಿ ಕೊರಗಜ್ಜನ ಕಟ್ಟೆ, ಕುದ್ಮನಮಜಲು ಪಟ್ಟೆ ಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರ ಬಿದ್ದು ಸುಮಾರು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಹಲವಾರು ವಾಸದ ಮನೆಗಳು, ಅಡಿಕೆ ತೋಟ, ತೆಂಗಿನ ಮರಗಳು ಸೇರಿದಂತೆ ಲಕ್ಷಾಂತರ ನಷ್ಠ ಉಂಟಾಗಿದೆ.
- Advertisement -


