Thursday, June 25, 2026
Homeಕರಾವಳಿಮಂಗಳೂರುಮೂಡಬಿದರೆ; ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೃದ್ಧ ಅರೆಸ್ಟ್

ಮೂಡಬಿದರೆ; ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೃದ್ಧ ಅರೆಸ್ಟ್

- Advertisement -
- Advertisement -

ಮೂಡಬಿದರೆ; ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೃದ್ಧನನ್ನುಮೂಡಬಿದಿರೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಳುವಾಯಿಯ ನಿವಾಸಿ ವೃದ್ಧ ರೆಹ್ಮಾನ್ (60) ಬಂಧಿತ ಆರೋಪಿ. ಮಂಗಳೂರು-ಮೂಡುಬಿದಿರೆ–ಕಾಕ೯ಳ ಮಧ್ಯೆ ಸಂಚರಿಸುವ ಖಾಸಗಿ ಬಸ್ ನಲ್ಲಿ ಘಟನೆ ನಡೆದಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಯಾರೂ ದೂರು ಕೊಡದ ಹಿನ್ನೆಲೆಯಲ್ಲಿ ಪೊಲೀಸರು ವೃದ್ಧನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದರು. ಆದರೆ ಶನಿವಾರ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆ ಮೂಡಬಿದಿರೆ ತೀವ್ರವಾಗಿ ವಿರೋಧಿಸಿದಲ್ಲದೆ ಸ್ವತ: ಸಂಘಟನೆ ವತಿಯಿಂದ ಮೂಡಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ ಜಿ ಅವರಿಗೆ ದೂರನ್ನು ನೀಡಿದ್ದರು. ಈ ಸಂದಭ೯ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಇನ್ಸ್ ಪೆಕ್ಟರ್ ಅವರು ತಕ್ಷಣ ಕಾಯ೯ಪ್ರವೃತರಾಗಿ ರೆಹ್ಮಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!