Friday, June 5, 2026
Homeತಾಜಾ ಸುದ್ದಿರಾಜ್ಯದಲ್ಲಿಂದು ಅಬ್ಬರಿಸಿದ ಕಿಲ್ಲರ್ ಕೊರೊನ , ಬೆಂಗಳೂರಿಗರಿಗೆ ತುಸು ನೆಮ್ಮದಿ

ರಾಜ್ಯದಲ್ಲಿಂದು ಅಬ್ಬರಿಸಿದ ಕಿಲ್ಲರ್ ಕೊರೊನ , ಬೆಂಗಳೂರಿಗರಿಗೆ ತುಸು ನೆಮ್ಮದಿ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಸತತ ನಾಲ್ಕನೇ ದಿನವೂ 5 ಸಾವಿರದ ಗಡಿ ದಾಟಿದೆ.ರವಿವಾರ ಒಂದೇ ದಿನ ರಾಜ್ಯದಲ್ಲಿ 5199 ಹೊಸದಾದ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 2088 ಮಂದಿ ಕೊರೋನಾ ವಿರುದ್ಧದ ಸಮರ ಗೆದ್ದು ಮನೆ ಸೇರಿದ್ದಾರೆ.
ಇಂದು ರಾಜ್ಯದಲ್ಲಿ ಒಟ್ಟು 5199 ಪ್ರಕರಣಗಳು ವರದಿಯಾಗಿದ್ದು, 82 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 96,141ಕ್ಕೇರಿಕೆಯಾಗಿದೆ. ಮೃತರ ಸಂಖ್ಯೆ 1878ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 1950 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 43503ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಇಂದು 29 ಮಂದಿ ಬಲಿಯಾಗಿದ್ದಾರೆ.

- Advertisement -

Latest News

error: Content is protected !!