Friday, April 19, 2024
Homeಪ್ರಮುಖ-ಸುದ್ದಿವಿಳಾಸ, ಮೊಬೈಲ್ ನಂಬರ್ ನಕಲಿ; ಬೆಂಗಳೂರಿನಲ್ಲಿ 3,338 ಕೊರೋನಾ ಸೋಂಕಿತರು ನಾಪತ್ತೆ; ಬಿಬಿಎಂಪಿಗೆ ಹೊಸ ತಲೆನೋವು

ವಿಳಾಸ, ಮೊಬೈಲ್ ನಂಬರ್ ನಕಲಿ; ಬೆಂಗಳೂರಿನಲ್ಲಿ 3,338 ಕೊರೋನಾ ಸೋಂಕಿತರು ನಾಪತ್ತೆ; ಬಿಬಿಎಂಪಿಗೆ ಹೊಸ ತಲೆನೋವು

spot_img
- Advertisement -
- Advertisement -

ಬೆಂಗಳೂರು : ಮಾರಕ ಕೊರೋನಾ ವೈರಸ್ ಮಹಾಮಾರಿ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಬ್ರೇಕ್ ಹಾಕಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಆದರೆ ಇತ್ತ ಉದ್ಯಾನ ನಗರಿಯಲ್ಲಿ ಬರೊಬ್ಬರಿ 3,338 ಕೊರೋನಾ ಸೋಂಕಿತರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೌದು.. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 36,993 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 27,992 ಆಯಕ್ಟೀವ್ ಪ್ರಕರಣಗಳು ಇವೆ. ಅಲ್ಲದೇ ಸುಮಾರು 8,279 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ ಮಾರಕ ವೈರಾಣುವಿಗೆ 722 ಜನ ಅಸುನೀಗಿದ್ದಾರೆ. ಈ ಮಧ್ಯೆ ಸುಮಾರು 3,338 ಕೋವಿಡ್-19 ಸೋಮಕಿತರು ನಾಪತ್ತೆಯಾಗಿರುವುದು ಸರ್ಕಾರವನ್ನು ತೀವ್ರ ಚಿಂತೆಗೀಡು ಮಾಡಿದೆ.


ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರ ಪೈಕಿ ಹಲವರು ತಮ್ಮ ಸರಿಯಾದ ವಿಳಾಸ ಹಾಗೂ ಇತರ ಮಾಹಿತಿ ನೀಡದೇ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಭಾಗಿಯಾಗಿ ಪಾಸಿಟಿವ್ ಎಂದು ಘೋಷಣೆಯಾದ ಒಟ್ಟು 3,338 ಜನ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾರೆ. ಪರೀಕ್ಷೆ ಸಮಯದಲ್ಲಿ ತಮ್ಮ ಮನೆಯ ವಿಳಾಸ ,ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿಗಳನ್ನು ಸರಿಯಾಗಿ ನೀಡದೇ, ಪಾಸಿಟಿವ್ ಬಂದಾಕ್ಷಣ ಇವರು ನಾಪತ್ತೆಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಸೋಂಕಿತರ ಹುಡುಕಾಟಕ್ಕೆ ಚಾಲನೆ ನೀಡಲಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿಯನ್ನಾಧರಿಸಿ ಶೋಧಕಾರ್ಯ ಆರಂಭಿಸಲಾಗಿದೆ. ನಾಪತ್ತೆಯಾದವರು ನಗರದಲ್ಲೇ ಇದ್ದಾರಾ ಅಥವಾ ಬೇರೆ ಊರುಗಳಿಗೆ ಹೋಗಿದ್ಧಾರಾ ಎಂಬುದು ತಿಳಿಯದಾಗಿದ್ದು, ಸೋಂಕಿತರ ಈ ಬೇಜವಾಬ್ದಾರಿ ವರ್ತನೆ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯವನ್ನು ಮತ್ತಷ್ಟು ಅಪಾಯಕ್ಕೆ ದೂಡಿದೆ.


ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್, ನಾಪತ್ತೆಯಾಗಿರುವ ಸೋಂಕಿತರ ಪತ್ತೆಗೆ ತಂಡ ರಚಿಸಲಾಗಿದೆಯಾದರೂ, ಸೋಂಕಿತರು ನೀಡಿರುವ ಸುಳ್ಳು ಮಾಹಿತಿ ಆಧಾರದ ಮೇಲೆ ಹುಡುಕುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!