Wednesday, June 24, 2026
Homeಪ್ರಮುಖ-ಸುದ್ದಿರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಪರಪ್ಪನ ಅಗ್ರಹಾರ ಸೇರಿದ ನಟ ದರ್ಶನ್;  ಡಿ ಬಾಸ್ ಈಗ...

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಪರಪ್ಪನ ಅಗ್ರಹಾರ ಸೇರಿದ ನಟ ದರ್ಶನ್;  ಡಿ ಬಾಸ್ ಈಗ ವಿಚಾರಣಾಧೀನ ಕೈದಿ ನಂಬರ್ 7314

- Advertisement -
- Advertisement -

ಬೆಂಗಳೂರು;  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದಾದ ಹಿನ್ನೆಲೆ ಮತ್ತೆ ಜೈಲು ಪಾಲಾಗಿದ್ದಾರೆ. ನಿನ್ನೆ ರಾತ್ರೋರಾತ್ರಿ ಅವರನ್ನು ಜೈಲಿಗೆ ಶಿಫ್ಟ್ ಮಾಡಿದ್ದಾರೆ. ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು ಅವರಿದೆ ಜೈಲು ಸಿಬ್ಬಂದಿ ಕೈದಿ ಸಂಖ್ಯೆ ನೀಡಿದ್ದಾರೆ. ನಟ ದರ್ಶನ್ ಗೆ ವಿಚಾರಣಾಧೀನ ಖೈದಿ ನಂ.7314 ನೀಡಿದ್ದಾರೆ. ಎ1 ಆರೋಪಿ ಪವಿತ್ರಾಗೌಡಗೆ ವಿಚಾರಣಾಧೀನ ಸಂಖ್ಯೆ 7313, ನಟ ದರ್ಶನ್ ಗೆ ಖೈದಿ ನಂ.7314 ನೀಡಲಾಗಿದೆ. ಇನ್ನೋರ್ವ ಆರೋಪಿ ಪ್ರದೋಶ್ 7317, ನಾಗರಾಜ್ ಗೆ 7315 ಹಾಗೂ ಲಕ್ಷ್ಮಣ್ ಗೆ 7316 ಕೈದಿ ಸಂಖ್ಯೆ ನೀಡಲಾಗಿದೆ.

ಈ ಹಿಂದೆ ದರ್ಶನ್  ಇದೇ ಕೇಸ್ ನಲ್ಲಿ ಜೈಲು ಸೇರಿದ್ದಾಗ ಕೈದಿ ನಂ.6106 ನೀಡಲಾಗಿತ್ತು.ಇನ್ಮೇಲೆ ಸಾಮಾನ್ಯ ಕೈದಿಗಳಂತೆ ನಟ ದರ್ಶನ್ ಜೈಲಿನಲ್ಲಿ ಸಮಯ ಕಳೆಯಲಿದ್ದಾರೆ.

- Advertisement -

Latest News

error: Content is protected !!