Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಹೊಸ ಜಾಗದಲ್ಲಿ ಪತ್ತೆಯಾಗದ ಅಸ್ಥಿಪಂಜರ; ಶಾಲಾ ಬಾಲಕಿಯ ಹೂತುಹಾಕಿದ ಪ್ರಕರಣದ ಜಾಗದಲ್ಲಿ ಕಾರ್ಯಾಚರಣೆ

ಬೆಳ್ತಂಗಡಿ: ಹೊಸ ಜಾಗದಲ್ಲಿ ಪತ್ತೆಯಾಗದ ಅಸ್ಥಿಪಂಜರ; ಶಾಲಾ ಬಾಲಕಿಯ ಹೂತುಹಾಕಿದ ಪ್ರಕರಣದ ಜಾಗದಲ್ಲಿ ಕಾರ್ಯಾಚರಣೆ

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ತಂಡ ಶುಕ್ರವಾರ ಹೊಸ ಸ್ಥಳದಲ್ಲಿ ಪರಿಶೀಲನೆ ವೇಳೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಆ.8 ರಂದು ಸಾಕ್ಷಿ ದೂರುದಾರನೊಂದಿಗೆ  ಎಸ್.ಐ.ಟಿ ತಂಡ 1:15 ರಿಂದ ಸಂಜೆ 5:30 ಗಂಟೆಯವರೆಗೆ ಮಿನಿ ಜೆಸಿಬಿ ಮತ್ತು ಕಾರ್ಮಿಕ ಜೊತೆ ಸೇರಿ ಕಾರ್ಯಾಚರಣೆ ನಡೆಸಿದಾಗ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಕಾರ್ಯಾಚರಣೆಯನ್ನು ಅಂತ್ಯ ಮಾಡಿ ಅಧಿಕಾರಿಗಳು ದೂರುದಾರನ ಜೊತೆ ವಾಪಸ್ ತೆರಳಿದ್ದಾರೆ.

ಕಲ್ಲೇರಿಯ 500 ಮೀಟರ್ ದೂರದಲ್ಲಿ ಶಾಲಾ ಸಮವಸ್ತ್ರದಲ್ಲಿ ಬ್ಯಾಗ್ ಇದ್ದ ಬಾಲಕಿಯನ್ನು ಹೂತು ಹಾಕಿದ ಪ್ರಕರಣದ ಜಾಗದಲ್ಲಿಯೇ ನಡೆದ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!