Thursday, June 4, 2026
Homeತಾಜಾ ಸುದ್ದಿವಿಧಾನಸಭೆ ಚುನಾವಣೆ ಹಿನ್ನೆಲೆ; ವಿವಿಧ ಇಲಾಖೆಗಳ ನೌಕರರ ಗೌರವ ಧನ ದ್ವಿಗುಣಗೊಳಿಸಿದ ಬಿಹಾರ ರಾಜ್ಯ ಸರ್ಕಾರ

ವಿಧಾನಸಭೆ ಚುನಾವಣೆ ಹಿನ್ನೆಲೆ; ವಿವಿಧ ಇಲಾಖೆಗಳ ನೌಕರರ ಗೌರವ ಧನ ದ್ವಿಗುಣಗೊಳಿಸಿದ ಬಿಹಾರ ರಾಜ್ಯ ಸರ್ಕಾರ

- Advertisement -
- Advertisement -

ಪಾಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಗೌರವಧನವನ್ನು ಹೆಚ್ಚಳ ಮಾಡಿದೆ.

ಶಿಕ್ಷಣ ಇಲಾಖೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದಡಿಯಲ್ಲಿ ಕೆಲಸ ನಿರ್ವಹಿಸುವ ಅಡುಗೆ ನೌಕರರ ಗೌರವಧನವನ್ನು 1,650 ರೂಪಾಯಿಗಳಿಂದ 3,300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಶಾಲೆಗಳಲ್ಲಿ ಕೆಲಸ ಮಾಡುವ ರಾತ್ರಿ ಕಾವಲುಗಾರರ ಗೌರವಧನವನ್ನು 5000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಏರಿಸಲಾಗಿದೆ

ಇನ್ನು ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರ ಗೌರವ ಧನವನ್ನು 8000 ರೂಪಾಯಿಗಳಿಂದ 16,000 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಅವರ ವಾರ್ಷಿಕ ವೇತನ ಹೆಚ್ಚಳವನ್ನು 200 ರೂಪಾಯಿಗಳಿಂದ 400 ರೂಪಾಯಿಗಳಿಗೆ ಏರಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ಅಂಗನವಾಡಿ, ಆಶಾ ಮತ್ತು ಮಮತಾ ಕಾರ್ಯಕರ್ತೆಯರ ವೇತನವನ್ನು ಬಿಹಾರ ಸರ್ಕಾರ ಹೆಚ್ಚಿಸಿತ್ತು.

- Advertisement -

Latest News

error: Content is protected !!