- Advertisement -
![]()
- Advertisement -
ಭಟ್ಕಳ; ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರು ನೀರುಪಾಲಾದ ಘಟನೆ ಭಟ್ಕಳದಲ್ಲಿ ನಡೆದಿದೆ.
ಮನೋಹರ ಎಂಬವರಿಗೆ ಸೇರಿದ ದೋಣಿಯಲ್ಲಿ ಒಟ್ಟು ಆರು ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿನ ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಪಲ್ಟಿಯಾಗಿದ್ದು, ನಾಲ್ವರೂ ನೀರು ಪಾಲಾಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ದೋಣಿ ಮಗುಚಿದ ಕೂಡಲೇ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ಮನೋಹರ ಮೊಗೇರ ಮತ್ತು ರಾಮಾ ಖಾರ್ವಿ ಅವರನ್ನು ರಕ್ಷಿಸಿದ್ದಾರೆ. ಆದರೆ, ರಾಮಕೃಷ್ಣ ಮೊಗೇರ, ಸತೀಶ ಮೊಗೇರ, ಗಣೇಶ ಮೊಗೇರ ಮತ್ತು ನಿಶ್ಚಿತ್ ಮೊಗೇರ ಎಂಬ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಪಲ್ಟಿಯಾದ ದೋಣಿ ಅಳ್ಳಕೋಡಿ ಬ್ರೇಕ್ ವಾಟರ್ ಬಳಿ ಪತ್ತೆಯಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -


