Thursday, June 4, 2026
Homeಕರಾವಳಿಔಷಧವೆಂದು ಭಾವಿಸಿ ಇಲಿ ಪಾಷಾಣವನ್ನು ಸೇವಿಸಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್; ಚಿಕಿತ್ಸೆಗೆ ಸ್ಪಂದಿಸದೆ ಸಾವು

ಔಷಧವೆಂದು ಭಾವಿಸಿ ಇಲಿ ಪಾಷಾಣವನ್ನು ಸೇವಿಸಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್; ಚಿಕಿತ್ಸೆಗೆ ಸ್ಪಂದಿಸದೆ ಸಾವು

- Advertisement -
- Advertisement -

ಮಂಗಳೂರು: ಇಲ್ಲಿನ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ರೊಬ್ಬರು ಇಲಿ ಪಾಷಾಣವನ್ನು ಔಷಧಿ ಎಂದು ತಪ್ಪಾಗಿ ಭಾವಿಸಿ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರತ್ಕಲ್ ಬಳಿಯ ಚೆಲ್ಯಾರು ನಿವಾಸಿ ಮತ್ತು ಹರೇಕಳ ಮೂಲದ ಮಂಜುನಾಥ ಹೆಗ್ಡೆ (44) ಅವರು ಮೃತಪಟ್ಟಿದ್ದಾರೆ.

  • ಮಂಜುನಾಥ ಹೆಗ್ಡೆ ಅವರು ತಮ್ಮ ಆರೋಗ್ಯ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಇಲಿ ಪಾಷಣವನ್ನು ಔಷಧವೆಂದು ಭಾವಿಸಿ ಅದನ್ನ ಕುಡಿದಿದ್ದರು. ನಂತರದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!