Thursday, June 4, 2026
Homeಕರಾವಳಿಉಡುಪಿಭಾರೀ ಮಳೆಗೆ ಜಿಲ್ಲೆಯ ಇಬ್ಬರು ಸಾವು

ಭಾರೀ ಮಳೆಗೆ ಜಿಲ್ಲೆಯ ಇಬ್ಬರು ಸಾವು

- Advertisement -
- Advertisement -

ಮಂಗಳೂರು/ಉಡುಪಿ: ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅವಘಡಗಳು ಸಂಭವಿಸಿದೆ. ಭಾನುವಾರದಂದು ಕೂಡ ಮಳೆ ತೀವ್ರವಾಗಿ ಗಾಳಿಯ ಜೊತೆಗೆ ಸುರಿದಿದ್ದು, ಸುರಿದ ಮಳೆಗೆ ಇಬ್ಬರು ಸಾವನ್ನಪ್ಪಿದ್ದು, ವ್ಯಾಪಕ ಆಸ್ತಿ ಹಾನಿಗೊಳಗಾಗಿದೆ.

ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿಯ ರುಕ್ಮಿಣಿ (62) ಎಂಬುವರು ತಮ್ಮ ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ಅವರ ಮೇಲೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ಮತ್ತೊಂದು ಘಟನೆಯಲ್ಲಿ, ಉಡುಪಿ ಜಿಲ್ಲೆಯ ಹೇಜಮಾಡಿಯ ಫಲಿಮಾರು ಪಾಡು ನಿವಾಸಿ ಜಯಂತಿ ಎಂ. ಕಾಂಚನ್ (87) ಅವರು ತಮ್ಮ ಅಂಗಳದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!