- Advertisement -
![]()
- Advertisement -
ಉಡುಪಿ; ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ ಆರೋಪಿಯನ್ನು ಮಣಿಪಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉಡುಪಿಯ ಕೊಡವೂರು ಗ್ರಾಮದ ಜುಮಾದಿನಗರದ ಸಾಗರ್ (25) ಬಂಧಿತ ವ್ಯಕ್ತಿ. ಜುಲೈ 26ರ ಶನಿವಾರ ಬೆಳಿಗ್ಗೆ ಸುಮಾರು 2.30 ಕ್ಕೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಸಾಗರ್ ನನ್ನು ಮಹಿಳಾ ಪೊಲೀಸ್ ಅಧಿಕಾರಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಬಂಧಿತನನ್ನು ನಿನ್ನೆ (ಜು.26) ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
- Advertisement -


