Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪತಿಯಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನ ಪ್ರಕರಣ;ಪ್ರಕರಣದ ರೂವಾರಿಗಳಾದ ಅತ್ತೆ...

ಬೆಳ್ತಂಗಡಿ : ಪತಿಯಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನ ಪ್ರಕರಣ;ಪ್ರಕರಣದ ರೂವಾರಿಗಳಾದ ಅತ್ತೆ -ಮಾವ ಪರಾರಿ: ಶ್ರೀಮಂತ ಕುಟುಂಬದ ರಾಕ್ಷಸ ಕ್ರೌರ್ಯ ಬಯಲು

- Advertisement -
- Advertisement -

ಬೆಳ್ತಂಗಡಿ: ಎರಡು ತಿಂಗಳ ಹಿಂದೆ ಮದುವೆಯಾದ ದಂಪತಿ ಹನಿಮೂನ್ ಗೆ ಬಂದು ಉಜಿರೆಯ ಪ್ರತಿಷ್ಠಿತ ಹೊಟೇಲ್ ನಲ್ಲಿ ಉಳಿದುಕೊಂಡು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ  ಪ್ರಕರಣದಲ್ಲಿ ಪತಿ, ಅತ್ತೆ ,ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಪತಿಗೆ ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನದ ವಿಧಿಸಿದ್ದು. ಅತ್ತೆ- ಮಾವ ಇದೀಗ ಪ್ರಕರಣದ ಬಳಿಕ ಪರಾರಿಯಾಗಿದ್ದು. ಶ್ರೀಮಂತ ಪತಿಯ ಕುಟುಂಬದ ಹಲವು ಕ್ರೌರ್ಯ ಬಯಲಾಗಿದೆ.

ಏನಿದು ಪ್ರಕರಣ?: ಬೆಂಗಳೂರಿನ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿಯಾಗಿರುವ ಸಿದ್ದರಾಜು ಗೌಡ ಅವರ ಪುತ್ರ ವಿಶ್ವನಾಥ್  ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿರುವ ವಿಶ್ವನಾಥ(24) ಎಂಬಾತ 22-05-2025 ರಂದು ಮದುವೆ ಯಾಗಿದ್ದು, ಜುಲೈ 22 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರತಿಷ್ಠಿತ ಹೊಟೇಲಿಗೆ ಬಂದು ರೂಮ್  ಪಡೆದು ತಂಗಿದ್ದರು. ಹೊಟೇಲ್ ರೂಂ ನಲ್ಲಿ ಜುಲೈ 22 ರಂದು ರಾತ್ರಿಯೇ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿಗೆ ವಿರುದ್ದ 22 ವರ್ಷದ ಪತ್ನಿ ನೇರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಜುಲೈ 23 ರಂದು ಸಂಜೆ ಬಂದು ಪತಿ ವಿಶ್ವನಾಥ ಎಂಬಾತನ ವಿರುದ್ಧ ದೂರು ನೀಡಿದ್ದಾಳೆ.ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ BNS 2023 (U/s-115(1),109,85)DOWRY PROHIBITION ACT, 1961 (U/s-4), ಅತ್ತೆ ಪ್ರೇಮಾ ಮಾವ ಸಿದ್ದರಾಜುಗೌಡ ಮೇಲೆ 85,4DP (2 ವರದಕ್ಷಿಣೆಗೆ ಬೇಡಿಕೆ, ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಬಂಧನ: ಆರೋಪಿ ಪತಿ ವಿಶ್ವನಾಥ್ (24) ನನ್ನು ಜುಲೈ 24 ರಂದು ಉಜಿರೆಯಲ್ಲಿ ಬೆಳ್ತಂಗಡಿ ಇನ್ಸೆಕ್ಟರ್ ಸುಬ್ಬಾಪು‌ರ್ ನೇತೃತ್ವದಲ್ಲಿ ಬಂಧಿಸಿ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶ್ರೀಮಂತ ಕುಟುಂಬವಾದರೂ ಕಡಿಯೆಯಾಗದ ಹಣದ ದಾಹ: ಆರೋಪಿಗಳಾದ ಪತಿ ವಿಶ್ವನಾಥ್, ಅತ್ತೆ ಪ್ರೇಮ, ಮಾವ ಸಿದ್ದರಾಜು ಅವರದ್ದು ಕುಟುಂಬ ಬಹಳ ಶ್ರೀಮಂತ ಕುಟುಂಬವಾಗಿದ್ದು, ಇವರ ಒಡೆತನದಲ್ಲಿ ಬಿಡದಿಯ ಬೈರಮಂಗಳದಲ್ಲಿ ಅದರ್ಶ ಇಂಗ್ಲೀಷ್ ಮೀಡಿಯಂ ಶಾಲೆ , ಬಿಡದಿ- ಬೈರಮಂಗಳ ರಸ್ತೆಯಲ್ಲಿ ಮೂರು ಬಾರ್ ಹಾಗೂ ಬೇಕಾದಷ್ಟು ಜಮೀನು ಹೊಂದಿದ್ದಾರೆ.

ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ಕೊಲೆಗೆ ಯತ್ನಿಸಿದ್ದರಿಂದ ದೇಹದ ವಿವಿಧ ಭಾಗಗಳಲ್ಲಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂತ್ರಸ್ತೆಯ ತಂದೆ ಮಹಾಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ಕಾರು,ಚಿನ್ನಕ್ಕಾಗಿ ಬೇಡಿಕೆ: ಆರೋಪಿ ಪತಿ ವಿಶ್ವನಾಥ್ ಮನೆ ಮತ್ತು ಪತ್ನಿ ಮನೆ 10 ಕಿ.ಮಿ ದೂರುದಲ್ಲಿದ್ದು. ವಿಶ್ವನಾಥನಿಗೆ ಬ್ರೋಕರ್ ಮೂಲಕ ಕಾಲೇಜ್ ಮುಗಿಸಿದ್ದ ಯುವತಿಯನ್ನು ನೋಡಿ ಮದುವೆ ಮಾಡಲಾಗಿತ್ತು. ಈ ನಡುವೆ ವಿಶ್ವನಾಥ ತಂದೆ-ತಾಯಿ ಮದುವೆ ವೇಳೆ ಕಾರು ಮತ್ತು ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದರು. ಮದುವೆ ಸಮಯದಲ್ಲಿ ಚಿನ್ನ ನೀಡಲು ಬಾಕಿ ಇತ್ತು . ಇನೋವಾ ಕಾರನ್ನು ಸಂತ್ರಸ್ತೆಯ ತಂದೆ ಬುಕ್ ಮಾಡಿದ್ದರು. ಇದೆ ವಿಚಾರದಲ್ಲಿ ಚಿನ್ನ ಕಾರು ನೀಡಲು ಪತ್ನಿಗೆ ಪತಿ ಮತ್ತು ಅತ್ತೆ ಮಾವ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ನಡುವೆ ಇನೋವಾ ಕಾರು ಬೇಡ ಫಾರ್ಚ್ಯೂನರ್ ಕಾರು ಬೇಕೆಂದು ಬೇಡಿಕೆ ಜಾಸ್ತಿ ಮಾಡಿದ್ದ. ಈ ವಿಚಾರವನ್ನು ಪತ್ನಿ ತಂದೆ ತಾಯಿಗೆ ಹೇಳದೆ ಸುಮ್ಮನಿದ್ದಳು‌. ಹನಿಮೂನಿಗೆ ಬಂದಾಗ ಬಾಕಿ ಇರುವ ವರದಕ್ಷಿಣೆ ಬೇಡಿಕೆ ಇಟ್ಟು   ಕೊಲೆಗೆ ಯತ್ನಿಸಿ ಪತಿ ಜೈಲುಪಾಲಾಗಿದ್ದಾನೆ. ಆದ್ರೆ ಪ್ರಕರಣ ಬೆಳಕಿಗೆ ಬಂದಾಗ ಅತ್ತೆ ಪ್ರೇಮ ಮತ್ತು ಮಾವ ಸಿದ್ದರಾಜು ಮೊಬೈಲ್ ಸ್ಪೀಚ್ ಆಫ್ ಮಾಡಿ ಪರಾರಿಯಾಗಿದ್ದು. ಬೆಳ್ತಂಗಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!