Friday, June 5, 2026
Homeಕರಾವಳಿಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಬಿಗಿದು 12 ವರ್ಷದ ಬಾಲಕ ಸಾವು

ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಬಿಗಿದು 12 ವರ್ಷದ ಬಾಲಕ ಸಾವು

- Advertisement -
- Advertisement -

ಕಾಸರಗೋಡು:  12 ವರ್ಷದ ಬಾಲಕನೋರ್ವಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ, ಆತನ ಕುತ್ತಿಗೆಗೆ ಸೀರೆ ಬಿಗಿದು ಮೃತಪಟ್ಟ ದಾರುಣ ಘಟನೆ ಚೆಂಗಳ ಸಮೀಪದ ನಾಲ್ಕನೇ ಮೈಲ್ ನಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ಆಂಧ್ರ ಪ್ರದೇಶ ಚಿತ್ತೂರು ಮೂಲದ ಮಸ್ತಾನ್ ಹಾಗೂ ನಸ್ರಿನಾ ದಂಪತಿ ಪುತ್ರ ಉಮ್ಮರ್ ಫಾರೂಕ್ ಎನ್ನಲಾಗಿದೆ.

ಇವರು ಚೆಂಗಳ ನಾಲ್ಕನೇ ಮೈಲ್ ನ ಕ್ವಾಟರ್ಸ್ ನಲ್ಲಿ ವಾಸವಾಗಿದ್ದು, ಸೋಮವಾರ ಮಧ್ಯಾಹ್ನ ತಂದೆ – ತಾಯಿ ಹೊರಗಡೆ ತೆರಳಿದ ಸಂದರ್ಭದಲ್ಲಿ ಮನೆಯ ಒಳಗಡೆಯ ಅಡ್ಡಕ್ಕೆ ಸೀರೆ ಕಟ್ಟಿ ಉಯ್ಯಾಲೆ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಬಿಗಿದು ಈ ದುರ್ಘಟನೆ ಸಂಭವಿಸಿದೆ. ತಾಯಿ ಮನೆಗೆ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಫಾರೂಕ್ ನ ಇಬ್ಬರು ಸಹೋದರಿಯರು ಹೊರಗಡೆ ಆಟವಾಡುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿದ್ಯಾನಗರ ಠಾಣಾ ಪೊಲೀಸರು ಆಗಮಿಸಿದ್ದು, ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!