Wednesday, June 3, 2026
Homeತಾಜಾ ಸುದ್ದಿರೇಣುಕಾಸ್ವಾಮಿ ‌ಕೊಲೆ ಪ್ರಕರಣ; ಸುಪ್ರಿಂ ಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದತಿ ಮೇಲ್ಮನವಿ ಅರ್ಜಿ...

ರೇಣುಕಾಸ್ವಾಮಿ ‌ಕೊಲೆ ಪ್ರಕರಣ; ಸುಪ್ರಿಂ ಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದತಿ ಮೇಲ್ಮನವಿ ಅರ್ಜಿ ಗುರುವಾರಕ್ಕೆ ಮುಂದೂಡಿಕೆ

- Advertisement -
- Advertisement -

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ ಜಾಮೀನು ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.

ದರ್ಶನ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಸಿದ್ಧಾರ್ಥ್ ದವೆ, ನಿನ್ನೆ ರಾತ್ರಿ ಈ ಕೇಸ್ ನನಗೆ ಬಂದಿದ್ದು, ವಾದ ಮಂಡಿಸಬೇಕಿದ್ದ ಕಪಿಲ್ ಸಿಬಲ್ ಬೇರೋಂದು ಪ್ರಕರಣದಲ್ಲಿ ಬ್ಯುಸಿಯಾಗಿರುವ ಕಾರಣ ವಾದ ಮಂಡಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಒಂದು ದಿನದ ಕಾಲಾವಕಾಶ ಕೊಡುವಂತೆ ಮನವಿ ಮಾಡಿದರು‌.

ಮನವಿ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

2024ರ ಡಿಸೆಂಬರ್ ನಲ್ಲಿ ದರ್ಶನ್ ಮತ್ತು ಇತರ ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ರದ್ದು ಪಡಿಸುವಂತೆ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

- Advertisement -

Latest News

error: Content is protected !!